ಕಾಸರಗೋಡು: ಅಖಿಲ ಕೇರಳ ಚಿಲ್ಲರೆ ಪಡಿತರ ವ್ಯಾಪಾರಿಗಳ ಸಂಘ (ಎಕೆಆರ್‍ಆರ್‍ಡಿಎ)ದ ಜಿಲ್ಲಾ ಸಮ್ಮೇಳನ ಕಾಸರಗೋಡಿನ ಬ್ಯಾಂಕ್ ರಸ್ತೆಯಲ್ಲಿರುವ ಜಿಲ್ಲಾ ಸಮಿತಿ ಸಭಾಂಗಣದಲ್ಲಿ ನಡೆಯಿತು. ಎಕೆಆರ್‍ಆರ್‍ಡಿಎ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಜಾನಿ ನೆಲ್ಲೂರು ಸಮಾರಂಭ ಉದ್ಘಾಟಿಸಿದರು.
ಸಂಘಟನೆ ಜಿಲ್ಲಾಅಧ್ಯಕ್ಷ ಶಂಕರ್ ಬೆಳ್ಳಿಗೆ ಅಧ್ಯಕ್ಷತೆ ವಹಿಸಿದ್ದರು. ಮಾಧ್ಯಮ ಸಮಿತಿ ಅಧ್ಯಕ್ಷ ಕೆ. ಶಶಿಧರನ್ ನಿರ್ಣಯ ಮಂಡಿಸಿದರು. ಈ ಸಂದರ್ಭ ವಕೀಲರಾಗಿ ದಾಖಲಾತಿ ನಡೆಸಿರುವ ಪಡಿತರ ವ್ಯಾಪಾರಿ, ವಕೀಲ ಪಿ. ವಿ. ಸುರೇಶ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ರಾಜ್ಯಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಮುಹಮ್ಮದಲಿ ಮುಖ್ಯ ಭಾಷಣ ಮಾಡಿದರು. ರಾಜ್ಯ ಕಾರ್ಯದರ್ಶಿ ಪಿ.ಕೆ ಅಬ್ದುಲ್ ರಹಮಾನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ನಟರಾಜನ್, ಕಾಸರಗೋಡು ತಾಲೂಕು ಅಧ್ಯಕ್ಷ ಸತೀಶನ ಇಡವೇಲಿ, ಜಿಲ್ಲಾ ಕೋಶಾಧಿಕಾರಿ ಇ.ಕೆ ಅಬ್ದುಲ್ಲ, ಜಿಲ್ಲಾ ಉಪಾಧ್ಯಕ್ಷರುಗಳಾದ ಪಿ.ಬಿ. ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.
ವೇತನಾ ಪ್ಯಾಕೇಜ್ ಪರಿಷ್ಕರಿಸದೆ ಯಾವುದೇ ವಿಷಯದಲ್ಲೂ ಸರ್ಕಾರದೊಂದಿಗೆ ಸಹಕರಿಸಲಾಗದು ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ವೇತನಾ ಪ್ಯಾಕೇಜ್ ಜಾರಿಗಾಗಿ ಸಂಘಟನೆ ವತಿಯಿಂದ ನಡೆಸಲಾಗಿರುವ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಪರಿಹಾರವಾಗಿದ್ದರೂ, ಇದನ್ನು ಜಾರಿಗೊಳಿಸದಿರುವ ಬಗ್ಗೆ ಸಭೆಯಲ್ಲಿ ಖಂಡಿಸಲಾಯಿತು.
ಪಡಿತರ ಅಂಗಡಿಗಳಲ್ಲಿನ ಮಾಪಕಗಳನ್ನು ಇ-ಪೆÇೀಸ್ ಸಲಕರಣೆಯೊಂದಿಗೆ ಜೋಡಿಸುವ ಮೊದಲು, ಎನ್‍ಎಫ್‍ಎಸ್‍ಎ ಗೋದಾಮುಗಳಲ್ಲಿನ ಮಾಪಕಗಳನ್ನು ಇ ಪೆÇೀಸ್‍ಗೆ ಜೋಡಿಸಬೇಕೆಂದು ಪಡಿತರ ವ್ಯಾಪಾರಿಗಳು ಒತ್ತಾಯಿಸಿದರು.

