ಕಾಸರಗೋಡು: ಶಿಕ್ಷಣದಲ್ಲಿ ಹಿಂದುಳಿದಿರುವಕೆ ಬಗ್ಗೆ ಆಯೋಜಿಸಲಾಗಿದ್ದ ಕೌನ್ಸೆಲಿಂಗ್ ತರಗತಿಗೆ ಆಗಮಿಸಿದ್ದ ಶಾಲಾ ವಿದ್ಯಾರ್ಥಿನಿಯನ್ನು ಬಿಗಿದಪ್ಪಿ ಚುಂಬಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕಾಞಂಗಾಡು ಕುಶಾಲನಗರ ರೈಲ್ವೆ ಗೇಟ್ ಸನಿಹದ ನಿವಾಸಿ, ವೈದ್ಯ ಡಾ. ವಿಶಾಖ್ ಕುಮಾರ್‍ನನ್ನು ಪೋಕ್ಸೋ ಅನ್ವಯ ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ವೈದ್ಯಕೀಯ ತಪಾಸಣೆಯ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
2023ರ ಸೆಪ್ಟಂಬರ್ ತಿಂಗಳಲ್ಲಿ ಘಟನೆ ನಡೆದಿತ್ತು. ಕಲಿಕೆಯಲ್ಲಿ ಹಿಂದುಳಿದಿದ್ದ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾರ್ಥಿನಿಯನ್ನು ಕಾಞಂಗಾಡಿನ ಈ ವೈದ್ಯನ ಬಳಿ ಕೌನ್ಸೆಲಿಂಗ್‍ಗಾಗಿ ಕಳುಹಿಸಿದ್ದ ಸಂದರ್ಭ ಕಿರುಕುಳ ನೀಡಲಾಗಿದ್ದು, ಭಯದಿಂದ ಬಾಲಕಿ ಈ ವಿಷಯ ಯಾರಲ್ಲೂ ಹೇಳಿರಲಿಲ್ಲ. ಪ್ರಸಕ್ತ ಪ್ಲಸ್‍ಟು ತರಗತಿಯಲ್ಲಿ ಕಲಿಯುತ್ತಿರುವ ಬಾಲಕಿಯನ್ನು ಮತ್ತೊಮ್ಮೆ ಕೌನ್ಸೆಲಿಂಗ್‍ಗೆ ಒಳಪಡಿಸಿದಾಗ ವೈದ್ಯ ನಡೆಸಿರುವ ದೌರ್ಜನ್ಯ ಬೆಳಕಿಗೆ ಬಂದಿದ್ದು, ತನಿಖೆಯನ್ನು ಹೊಸದುರ್ಗ ಠಾಣೆಗೆ ಹಸ್ತಾಂತರಿಸಲಾಗಿತ್ತು.

