HEALTH TIPS

ಆಗಸ್ಟ್ 17ರಂದು ಕುಂಬ್ಡಾಜೆ ಬಂಟರ ಸಂಘದ ವತಿಯಿಂದ ಮರಿಯಲದ ಮಿನದನ ಕಾರ್ಯಕ್ರಮ

ಬದಿಯಡ್ಕ: ಕುಂಬ್ಡಾಜೆ ಬಂಟರ ಸಂಘದ ವತಿಯಿಂದ ಆಗಸ್ಟ್ 17ರಂದು ಪೊಡಿಪಳ್ಳದಲ್ಲಿ ಮರಿಯಲದ ಮಿನದನ ಕಾರ್ಯಕ್ರಮ ಜರಗಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಹಿರಿಯರಾದ ದೇವಣ್ಣ ರೈ ಪುತ್ರಕಳ ಬಿಡುಗಡೆಗೊಳಿಸಿದರು. ಸ್ಥಳಾವಕಾಶವನ್ನು ನೀಡಿದ ಸದಾಶಿವ ಶೆಟ್ಟಿ ಪುತ್ರಕಳ ಇವರಿಗೆ ನೀಡಲಾಯಿತು. ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ  ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಸೇರಿದರೆ ಮಾತ್ರ ಸಾಧ್ಯ. ನಮ್ಮೀ ಕಾರ್ಯಕ್ರಮಕ್ಕೆ ಸಮಾಜದ ಗೌರವಾನ್ವಿತರಾದ ಕೊಡುಗೈ ದಾನಿ ಕುಳೂರು ಕನ್ಯಾನ ಡಾ. ಸದಾಶಿವ ಶೆಟ್ಟಿ, ಕೆ.ಕೆ.ಶೆಟ್ಟಿ ಮುಂಡಪಳ್ಳ, ವಿಶೇಷ ಆಹ್ವಾನಿತರಾಗಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ, ಜಿಲ್ಲಾಧ್ಯಕ್ಷ ಬಿ.ಸುಬ್ಬಯ್ಯ ರೈ, ಕುಂಬಳೆ ಫಿರ್ಕದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಜದಗುತ್ತು ಪಾಲ್ಗೊಳ್ಳಲಿದ್ದಾರೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ವೈಭವ ನಡೆಯಲಿದೆ. ಪ್ರತಿಭಾನ್ವಿತರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು. 


ಕಾಸರಗೋಡು ಜಿಲ್ಲಾ ಬಂಟರ ಯಾನೆ ನಾಡವರ ಸಂಘದ ಸಂಚಾಲಕ ಸುಧೀರ್ ಕುಮಾರ್ ರೈ ಗಾಡಿಗುಡ್ಡೆ ಮಾತನಾಡಿ, ಆ. 10 ರಂದು ಮಂಗಲ್ಪಾಡಿಯಲ್ಲಿ ನಡೆಯುವ ಆಟಿದ ಕೂಟ ಕಾರ್ಯಕ್ರಮಕ್ಕೆ ಎಲ್ಲರನ್ನು ಆಹ್ವಾನಿಸಿದರು. ಜಿಲ್ಲಾ ಸಂಘದ ಸದಸ್ಯೆ ಸುನಿತಾ ಜೆ ರೈ ಮರೆತ್ತಿಲ ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷರಗಳಾದ ಹರ್ಷಕುಮಾರ್ ರೈ ಬೆಳಿಂಜ, ರವೀಂದ್ರ ರೈ ಗೋಸಾಡ ಸದಸ್ಯರುಗಳಾದ ನವೀನ್ ರೈ ಪುತ್ರಕಳ, ಜಯಪ್ರಕಾಶ್ ಶೆಟ್ಟಿ ಮುಂಡ್ರಕೊಳಂಜಿ, ಪಿರ್ಕಾ ಸಂಘದ ಕಾರ್ಯದರ್ಶಿ ಸುರೇಶ್ ಶೆಟ್ಟಿ ಮೊಟ್ಟೆಕುಂಜ, ಅನಂತ ರೈ ಬೆಳಿಂಜ, ಹರ್ಷ ಕುಮಾರ್ ಪುತ್ರಕಳ, ಸಂತೋಷ್ ರೈ ಪುತ್ರಕಳ ಮತ್ತು ಊರಿನ ಎಲ್ಲಾ ಸಮುದಾಯ ಬಾಂಧವರು ಭಾಗವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಅಮೃತ ರಾಜ್ ರೈ ಮರತ್ತಿಲ ಸ್ವಾಗತಿಸಿ, ಖಜಾಂಜಿ ಸೀತಾರಾಮ ಮುಂಡ್ರಕೊಳಂಜಿ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries