ತಿರುವನಂತಪುರಂ: ಸಾಮಾನ್ಯ ಶಿಕ್ಷಣ ನಿರ್ದೇಶನಾಲಯವು 2025-26 ರ ಸಾಮಾನ್ಯ ವರ್ಗಾವಣೆಯ ನಂತರ ಉಳಿದಿರುವ ಖಾಲಿ ಹುದ್ದೆಗಳಿಗೆ ರಾಜ್ಯದ ಸರ್ಕಾರಿ ಉನ್ನತ ಮಾಧ್ಯಮಿಕ ಶಾಲಾ(ಹೈಯರ್ ಸೆಕೆಂಡರಿ) ಶಿಕ್ಷಕರ ವರ್ಗಾವಣೆಯನ್ನು ಹೊಂದಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಮೊದಲ ಹಂತವಾಗಿ, ಹೊಂದಾಣಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸುವವರು ಮತ್ತು ಸಾಮಾನ್ಯ ವರ್ಗಾವಣೆಯ ನಂತರ ಹೊಸದಾಗಿ ನೇಮಕಗೊಂಡವರು ಜುಲೈ 17 ರೊಳಗೆ dhsetransfer.kerala.gov.in ಪೋರ್ಟಲ್‍ನಲ್ಲಿ ತಮ್ಮ ಪ್ರೋಫೈಲ್ ಅನ್ನು ನವೀಕರಿಸಬೇಕು.
ಪ್ರೋಫೈಲ್ ಅನ್ನು ಪರಿಶೀಲಿಸುವಾಗ, ಯಾವುದೇ ತಿದ್ದುಪಡಿಗಳು ಅಗತ್ಯವಿದ್ದರೆ, ಅವರು ಅದನ್ನು ಪರಿಶೀಲನೆಗಾಗಿ ಸಂಬಂಧಿತ ದಾಖಲೆಗಳೊಂದಿಗೆ ಪೋರ್ಟಲ್ ಮೂಲಕ ಪ್ರಾಂಶುಪಾಲರಿಗೆ ಸಲ್ಲಿಸಬೇಕು. ಪ್ರಾಂಶುಪಾಲರಿಂದ ಪರಿಶೀಲನೆ, ತಿದ್ದುಪಡಿ ಮತ್ತು ಸೇರ್ಪಡೆಯ ನಂತರ, ಶಿಕ್ಷಕರು ತಮ್ಮ ಪ್ರೋಫೈಲ್ ಅನ್ನು ದೃಢೀಕರಿಸಬೇಕು.
ಜುಲೈ 17 ರ ನಂತರ ಹೊಂದಾಣಿಕೆ ವರ್ಗಾವಣೆಗೆ ಅರ್ಜಿಯನ್ನು ಆಹ್ವಾನಿಸಲಾಗುವುದರಿಂದ, ನಂತರ ಪ್ರೋಫೈಲ್ ಅನ್ನು ಸರಿಪಡಿಸಲು ಯಾವುದೇ ಅವಕಾಶವಿರುವುದಿಲ್ಲ. ವಿವರಗಳನ್ನು ಒಳಗೊಂಡ ಸುತ್ತೋಲೆಯನ್ನು ವರ್ಗಾವಣೆ ಪೋರ್ಟಲ್‍ನಲ್ಲಿ ಪ್ರಕಟಿಸಲಾಗಿದೆ.


