ಪೆರ್ಲ:ಎಣ್ಮಕಜೆ ಪಂಚಾಯಿತಿ ಕುಟುಂಬಶ್ರೀ ಸಿಡಿಎಸ್ ವತಿಯಿಂದ ಬಜಕೂಡ್ಲು ಶ್ರೀ ಏರೋಟಿ ಧೂಮಾವತೀ ದೈವಸ್ಥಾನ ಸನಿಹದ ಗದ್ದೆಯಲ್ಲಿ ಶನಿವಾರ ನಡೆದ ಕೆಸರುಗದ್ದೆ ಉತ್ಸವ ವ್ಯಾಪಕ ಜನಮನ್ನಣೆಗೆ ಕಾರಣವಾಯಿತು.
ಬೆಳಗ್ಗೆ ನಡೆದ ಸಮಾರಂಭದಲ್ಲಿ ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್ ಸಮಾರಂಭ ಉದ್ಘಾಟಿಸಿದರು. ಕುಡುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಸೌದಾಬಿ ಹನೀಫ್, ಉಷಾಗಣೇಶ್ ಹಾಗೂ ಕುಟುಂಬಶ್ರೀ ಪದಾಧಿಕಾರಿಗಳು, ಸದಸ್ಯರು ಉಪಸ್ಥೀತರಿದ್ದರು.
ಕುಟುಂಬಶ್ರೀ ಸದಸ್ಯರಿಗೆ, ಸಾರ್ವಜನಿಕರಿಗೆ ಹಾಗೂ ಮಕ್ಕಳಿಗಾಗಿ ಕೆಸರುಗದ್ದೆಯಲ್ಲಿ ನಾನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳು, ಮಹಿಳೆಯರು ಕೆಸರುಗದ್ದೆಯಲ್ಲಿ ಕುಣಿದು ಕುಪ್ಪಳಿಸಿದರು. ಓಟದ ಸ್ಪರ್ಧೆ, ಸಂಗೀತ ಕುರ್ಚಿ, ಹಗ್ಗಜಗ್ಗಾಟ ಸೇರಿದಂತೆ ನಾನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ಕೆಸರುಗದ್ದೆ ಆಯೋಜಿಸಿದ್ದ ಗದ್ದೆಯಲ್ಲಿ ನೇಜಿ ನೆಡುವ ನಾಟಿ ಉತ್ಸವದಲ್ಲಿ ಕುಟುಂಬಶ್ರೀ ಸದಸ್ಯೆಯರು,ಊರವರು ಪಾಲ್ಗೊಂಡಿದ್ದರು.



