ಕಾಸರಗೋಡು: ಪೆರಿಯ ಮುತ್ತನಡ್ಕದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 256.92ಗ್ರಾಂ ಮಾರಕ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಬೇಕಲ ಠಾಣೆ ಪೊಲೀಸರು ಮತ್ತೆ ಮೂವರನ್ನು ಬೆಂಗಳೂರಿನಿಂದ ಬಂಧಿಸಿದ್ದಾರೆ. ಕಣ್ಣೂರು ಕೂತುಪರಂಬ ನಿವಾಸಿ ಕೆ.ಪಿ ಮಹಮ್ಮದ್ ಅಜ್ಮಲ್ ಕರೀಂ, ಪಾಲಕ್ಕಾಡ್ ಮಣ್ಣಾರ್‍ಕಾಡ್ ನಿವಾಸಿ ವಿ.ಪಿ ಜಂಶಾದ್ ಹಾಗೂ ಕುಂಜಕ್ಕೋಡ್ ನಿವಾಸಿ ಫಾಯಿಸ್ ಬಂಧಿತರು. ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಪೆರಿಯ ಮುತ್ತನಡ್ಕದಿಂದ ಬಂಧಿತರಾದ ಪೊವ್ವಲ್ ನಿವಾಸಿ ಮಹಮ್ಮದ್ ಡ್ಯಾನಿಶ್ ಹಾಗೂ ಆಲಂಪಾಡಿ ನಿವಾಸಿ ಅಬ್ದುಲ್ ಖಾದರ್ ನೀಡಿದ ಮಾಹಿತಿಯನ್ವಯ ಇವರನ್ನು ಬಂಧಿಸಲಾಗಿದೆ. ಬೇಕಲ ಡಿವೈಎಸ್‍ಪಿ ವಿ.ವಿ ಮನೋಜ್ ನೇತೃತ್ವದ ಪೊಲೀಸರ ತಂಡ ತನಿಖೆ ನಡೆಸುತ್ತಿದೆ.

