ಉಪ್ಪಳ: ಮಂಗಲ್ಪಾಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಪ್ಲಸ್ ವನ್ ತರಗತಿಯ ವಿದ್ಯಾರ್ಥಿನಿಗೆ ಅದೇ ಶಾಲೆಯ ಪ್ಲಸ್‍ಟು ತರಗತಿ ವಿದ್ಯಾರ್ಥಿನಿಯರ ತಂಡವೊಂದು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ತಾನು ಶಾಲೆ ಬಿಟ್ಟು ಉಪ್ಪಳ ನಯಾಬಜಾರಿನ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಂದರ್ಭ ವಿದ್ಯಾರ್ಥಿನಿಯರ ತಂಡವೊಂದು ತಡೆದುನಿಲ್ಲಿಸಿ ಕೆನ್ನೆಗೆ ಥಳಿಸಿರುವುದಲ್ಲದೆ, ಬೆದರಿಕೆಯೊಡ್ಡಿರುವುದಾಗಿದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

