ಕಾಸರಗೋಡು: ತ್ರಿಕ್ಕರಿಪುರ ಕರಾವಳಿ ಪೊಲೀಸ್ ಠಾಣೆ ವ್ಯಾಪ್ತಿಯ ನೀಲೇಶ್ವರ ಮರಿಕಾಪು ಕಡಪ್ಪುರದಲ್ಲಿ ಎರಡು ಫೈಬರ್ ದೋಣಿಗಳು ಪರಸ್ಪರ ಡಿಕ್ಕಿಯಾಗಿ ಒಬ್ಬ ಮೃತಪಟ್ಟಿದ್ದಾರೆ. ಕಾಞಂಗಾಡು ಪೂಂಜಾವಿ ಕಡಪ್ಪುರ ನಿವಾಸಿ ಹರಿದಾಸನ್(57)ಮೃತಪಟ್ಟವರು. ಗಾಯಾಳು ಹರಿದಾಸ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಬಲವಾದ ಅಲೆಗಳಿಗೆ ಸಿಲುಕಿ ಎರಡೂ ದೋಣಿಗಳು ಡಿಕ್ಕಿಯಾಗಿತ್ತು. ದೋಣಿಯಲ್ಲಿದ್ದ ಇತರರು ಗಾಯಗಳಿಲ್ಲದೆ ಪಾರಾಗಿದ್ದಾರೆ.

