ಬದಿಯಡ್ಕ: ಪಳ್ಳತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಎಲ್ಲಾ ಮಕ್ಕಳಿಗೂ ಶಾಲಾ ವ್ಯವಸ್ಥಾಪಕರ ವತಿಯಿಂದ ಡಿಜಿಟಲ್ ಸ್ಲೇಟ್ ವಿತರಿಸಲಾಯಿತು.
ಶಾಲಾ ಅಸೆಂಬ್ಲಿಯಲ್ಲಿ ವ್ಯವಸ್ಥಾಪಕ ಪ್ರತಿನಿಧಿ ಶ್ಯಾಮಲಾ ಎಸ್ ಯನ್. ಭಟ್ ವಿತರಿಸಿ ಮಾತನಾಡಿ ಮುಂದಿನ ವರ್ಷಗಳಲ್ಲಿಯೂ ಒಂದನೇ ತರಗತಿಯ ಮಕ್ಕಳಿಗೆ ಕಲಿಕೋಪಕರಣಗಳನ್ನು ನೀಡುವುದಾಗಿ ತಿಳಿಸಿದರು. ಮುಖ್ಯ ಶಿಕ್ಷಕಿ ಮಲ್ಲಿಕಾ ಉಪಸ್ಥಿತರಿದ್ದರು.

.jpg)
