ಬದಿಯಡ್ಕ: ಇತ್ತೀಚೆಗೆ ಬಿದ್ದು ಸಿಕ್ಕಿದ ಚಿನ್ನವನ್ನು ವಾರೀಸುದಾರರಿಗೆ ಮರಳಿಸಿದ ರೋಟರಿ ಬದಿಯಡ್ಕ ಘಟಕದ ಸದಸ್ಯ ಕೊರೆಕ್ಕಾನ ಜಗನ್ನಾಥ ರೈ ಅವರನ್ನು ರೋಟರಿ ಇಂಟರ್‍ನೇಶನಲ್ ಬದಿಯಡ್ಕ ಘಟಕದ ವತಿಯಿಂದ ಅಭಿನಂದಿಸಲಾಯಿತು. ಅಧ್ಯಕ್ಷ ಕೇಶವ ಪಾಟಾಳಿ ಬಿ., ಕಾರ್ಯದರ್ಶಿ ರಮೇಶ ಆಳ್ವ ಕಡಾರು, ಉಪಾಧ್ಯಕ್ಷ ಗುರುಪ್ರಸಾದ ಶೆಣೈ, ಸದಸ್ಯರಾದ ರಾಘವೇಂದ್ರ ಅಮ್ಮಣ್ಣಾಯ, ಕೃಷ್ಣಪ್ರತೀಕ್ ಬೆಳ್ಳಿಗೆ ಹಾಗೂ ಸಾಮಾಜಿಕ ಕಾರ್ಯಕರ್ತರಾದ ತಾರಾನಾಥ ರೈ ಕಡಾರು, ನಿರಂಜನ ರೈ ಪೆರಡಾಲ, ಜಗನ್ನಾಥ ಕುಂಟಾಲುಮೂಲೆ ಜೊತೆಗಿದ್ದರು.
-ನಾಡಿಗೆ ಮಾದರಿಯಾದ ಕಾರ್ಯವನ್ನು ನಮ್ಮ ರೋಟರಿಯ ಸದಸ್ಯರೋರ್ವರು ಕೈಗೊಂಡಿರುವುದು ಎಲ್ಲರಿಗೂ ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿ ಇವರನ್ನು ಗೌರವಿಸುವುದು ಹೆಮ್ಮೆಯ ವಿಚಾರ.
- ಕೇಶವ ಪಾಟಾಳಿ ಬಿ., ರೋಟರಿ ಅಧ್ಯಕ್ಷ

.jpg)
