ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಗುರುಪೂರ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ವಿದ್ಯರ್ಥಿಗಳೆಲ್ಲರೂ ಶ್ರೀಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗುರುವಿನ ಸ್ಮರಣೆಗೈದು ಗುರುಸ್ತುತಿಯನ್ನು ಹಾಡಿದರು. ಹತ್ತನೆಯ ತರಗತಿಯ ನಿತೀಶ್ ಸಾಗರ್ ಮಾನ್ಯ ಹಾಗೂ ಅವನಿ ಮಿತ್ತಜಾಲು "ಗುರುವಿನ ಮಹಿಮೆ" ಎಂಬ ವಿಷಯದಲ್ಲಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಪೂರ್ವ ಅಧ್ಯಾಪಿಕೆ ರಶ್ಮೀ ಪೆರ್ಮುಖ ಇವರನ್ನು ಗೌರವಿಸಲಾಯಿತು. ಅವರು ವಿದ್ಯಾರ್ಥಿಗಳನ್ನದ್ದೇಶಿಸಿ ಮಾತನಾಡಿ "ಗುರುವು ಹಿತೈಶಿ, ದಾರಿದೀಪ ಅವರ ಮಾರ್ಗದರ್ಶನವಿಲ್ಲದೇ ಜ್ಞಾನ ಸಂಪಾದನೆ ಅಸಾಧ್ಯ, ಅವರ ಸ್ಮರಣೆ ನಮ್ಮ ಮನದಲ್ಲಿ ಸದಾ ಇರಬೇಕು. ಈ ರೀತಿಯ ಜೀವನ ಧನ್ಯ. ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದಲ್ಲಿ ಗುರಿ ಸಾಧಿಸುವಲ್ಲಿ ಯಶಸ್ಸು ಕಾಣಿರಿ" ಎಂದು ಹೇಳುತ್ತಾ ವಿದ್ಯಾರ್ಥಿಗಳನ್ನು ಹರಸಿದರು. ಶಾಲಾ ನಾಯಕಿ ಹತ್ತನೆಯ ತರಗತಿಯ ಸಂಜನಾ ಎನ್ ಶೆಟ್ಟಿ ಹಾಗೂ ಉಪನಾಯಕಿ ಸಮನ್ವಿ ಕೆ.ಎಸ್ ಶಾಲೆಯ ಪರವಾಗಿ ಗೌರವಪೂರ್ವಕ ಕಿರುಕಾಣಿಕೆ ನೀಡಿ ಗೌರವಿಸಿದರು.
ಶಾಲಾ ಆಡಳಿತ ಮಂಡಳಿ ಸದಸ್ಯ ಮಧುಸೂದನ ತಿಮ್ಮಕಜೆ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಪಂಜಿತಡ್ಕ, ಶಿಕ್ಷಕಿ ಮಮತಾ ಸಾವಿತ್ರಿ, ಗುರುಪೂರ್ಣಿಮೆಯ ಹಿನ್ನಲೆ, ಮಹತ್ವ ಇವುಗಳ ಬಗೆಗೆ ಮಾತನಾಡಿದರು.

.jpg)
