ಕಾಸರಗೋಡು: ಹೊಸದುರ್ಗ ತಾಲ್ಲೂಕಿನ ಪೆರಿಯ ಗ್ರಾಮದಲ್ಲಿ, ಚೆಂಗರ ಪುನರ್ವಸತಿ ಯೋಜನೆಯನ್ವಯ ಭೂಮಿ ಮಂಜೂರಾಗಿ ಲಭಿಸಿದ್ದರೂ, ದೀರ್ಘ ಕಾಲದಿಂದ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದ ಫಲಾನುಭವಿಗಳಿಗೆ ಭೂಮಿಯ ಹಕ್ಕುಪತ್ರ ಹಸ್ತಾಂತರಿಸಲಾಯಿತು.
ಈ ಮೂಲಕ ದೀರ್ಘ ಕಾಳದಿಂದ ಇಲ್ಲಿನ ಜನತೆ ಅನುಭವಿಸುತ್ತಿದ್ದ ಸಮಸ್ಯೆಯೊಂದಕ್ಕೆಪರಿಹಾರ ಲಭಿಸಿದಂತಾಗಿದೆ. ಒಟ್ಟು 58 ಕುಟುಂಬಗಳಿಗೆ ಹಕ್ಕುಪತ್ರ ಹಸ್ತಾಂತರಿಸಲಾಯಿತು.ಪೆರಿಯ ಗ್ರಾಮದಲ್ಲಿ ಸರ್ವೆ ಸಂಖ್ಯೆ 341/1 ರಲ್ಲಿ ಇವರಿಗೆ ಭೂಮಿಯನ್ನು ಹಂಚಿಕೆ ಮಾಡಲಾಗಿತ್ತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಫಲಾನುಭವಿಗಳ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಮೇ 10, 2021 ರಂದು ಹೊರಡಿಸಲಾದ ಆದೇಶದ ಆಧಾರದ ಮೇಲೆ ನಿಯಂತ್ರಣದಲ್ಲಿದ್ದ ಭೂಮಿಯನ್ನು ಕಂದಾಯ ಇಲಾಖೆಗೆ ಹಿಂತಿರುಗಿಸಲಾಗಿತ್ತು.
ಹಕ್ಕುಪತ್ರ ಮಂಜೂರು ಮಾಡಿದ 60 ಜನರಲ್ಲಿ, ತಲಾ 50 ಸೆಂಟ್ಸ್ ಅನ್ನು ಪರಿಶಿಷ್ಟ ಜಾತಿಗಳಿಗೆ ನೀಡಲಾಯಿತು. ಇತರ ವಿಭಾಗಗಳಿಗೆ ತಲಾ 25 ಸೆಂಟ್ಸ್ ಭೂಮಿಯನ್ನು ನೀಡಲಾಯಿತು. ಇದರಲ್ಲಿ 42 ಸೆಂಟ್ಸ್ ಭೂಮಿಯನ್ನು ಪರಿಶಿಷ್ಟ ಜಾತಿಗಳಿಗೆ ಕೃಷಿ ಉದ್ದೇಶಗಳಿಗಾಗಿ ಮತ್ತು ಎಂಟು ಸೆಂಟ್ಸ್ ಭೂಮಿಯನ್ನು ವಸತಿ ಉದ್ದೇಶಗಳಿಗಾಗಿ ನೀಡಲಾಗಿದೆ. ಇದರಲ್ಲಿ 17 ಸೆಂಟ್ಸ್ ವಸತಿ ಉದ್ದೇಶಗಳಿಗಾಗಿ ಮತ್ತು 17 ಸೆಂಟ್ಸ್ ಕೃಷಿ ಉದ್ದೇಶಗಳಿಗಾಗಿ ಮೀಸಲಿರಿಸಲಾಗಿತ್ತು.
ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರ ಸೂಚನೆಯನ್ವಯ ಕೃಷಿ ಭೂಮಿಯ ಗಡಿ ಗುರುತಿಸುವಿಕೆ ಮತ್ತು ಸಮೀಕ್ಷೆ ಪೂರ್ಣಗೊಳಿಸಲಾಗಿತ್ತು. ಹೊಸದುರ್ಗ ತಾಲ್ಲೂಕಿನಲ್ಲಿ ನಡೆದ ಸಮಾರಂಭದಲ್ಲಿ ಕಾಞಂಗಾಡ್ ಪ್ರಭಾರ ಆರ್‍ಡಿಒ ಬಿನು ಜೋಸೆಫ್ ಹಕ್ಕುಪತ್ರ ವಿತರಿಸಿದರು. ಹೊಸದುರ್ಗ ತಹಸೀಲ್ದಾರ್ ಜಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಭೂದಾಖಲೆ ತಹಸೀಲ್ದಾರ್ ವಿ.ಅಶೋಕನ್, ಉಪ ತಹಸೀಲ್ದಾರರಾದ ಕೆ.ರಮೇಶ್, ಅನಿಲ್ ಸಿ.ಫಿಲಿಪ್, ಪೆರಿಯ ವಿಶೇಷ ಗ್ರಾಮಾಧಿಕಾರಿ ಕೆ.ರಂಜಿನಿ ಉಪಸ್ಥಿತರಿದ್ದರು.


