ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣದ ಬಳಿಯ ಪಾದೂರು ಶಾಪಿಂಗ್ ಕಾಂಪ್ಲೆಕ್ಸ್‍ನಲ್ಲಿ ಆರಂಭಗೊಂಡ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರವನ್ನು ಆರ್ಯ ಯಾನೆ ಮರಾಠ ಸಮಾಜ ಸಂಘದ ಗೌರವ ಅಧ್ಯಕ್ಷೆ ಪ್ರೇಮಲತಾ ವೈ ರಾವ್ ಉದ್ಘಾಟಿಸಿದರು.
ಕಾಸರಗೋಡು ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂ ಅತಿಥಿಯಾಗಿ ಭಾಗವಹಿಸಿದ್ದರು. ಎಸ್.ಎಲ್.ಬಿ.ಕುಞËಬಿ ಪ್ರಥಮ ಮಾರಾಟ ನಡೆಸಿಕೊಟ್ಟರು. ಮಂಗಳೂರು ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ಪುಷ್ಪಲತಾ, ಕಾಸರಗೋಡು ನಗರಸಭೆ ಸದಸ್ಯ ವರಪ್ರಸಾದ್ ಕೋಟೆಕಣಿ, ಡಾ.ಜೀವನ್, ಎಸ್.ಕೆ.ಸ್ಪಂದನಮೋಹನ್ ನಾಯಕ್ ದೇವರಗುಡ್ಡೆ, ಮಂಗಳೂರು ಕೊಣಾಜೆ ಠಾಣೆ ಎಎಸ್ ಐ ಸಂತೋಷ್ ಕುಮಾರ್, ದರ್ಶನ್, ಸಂಕೇತ್, ಆಶಾ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಿಕ ಉಮೇಶ್ ಸ್ವಾಗತಿಸಿದರು.

