ಮಂಜೇಶ್ವರ: ವಿಶ್ವಹಿಂದೂ ಪರಿಷತ್ ಮಾತೃ ಮಂಡಳಿ ಉಪಖಂಡ ಸಮಿತಿ ಸಂತಡ್ಕ ಮತ್ತು ಅರಸು ಸಂಕಲ ದೈವಕ್ಷೇತ್ರ ಸಂತಡ್ಕ ಇದರ ಸಹಯೋಗದೊಂದಿಗೆ ಇಪ್ಪತ್ತೆರಡನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಶುಕ್ರವಾರ ಅರಸುಸಂಕಲ ಭವನ ಅರಸು ಸಂಕಲ ದೈವ ಕ್ಷೇತ್ರ ಸಂತಡ್ಕ ಮಾಡದಲ್ಲಿ ಜರಗಿತು.
ಈ ಸಂದರ್ಭ ಹಮ್ಮಿಕೊಂಡ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನವನವನ್ನು ನೀಡಿದ ವಿಶ್ವ ಹಿಂದು ಪರಿಷತ್ ಕಾಸರಗೋಡು ಜಿಲ್ಲಾ ಬಾಲ ಸಂಸ್ಕಾರ ಪ್ರಮುಖ್ ಸೌಮ್ಯಪ್ರಕಾಶ ಮದಂಗಲ್ಲುಕಟ್ಟೆ ಇವರು ಮಾತೆಯರನ್ನುದ್ದೇಶಿಸಿ ನಾತನಾಡಿ, ನಮ್ಮ ಮಕ್ಕಳನ್ನು ಹಿಂದೂ ಧರ್ಮದ ದೊಡ್ಡ ಆಸ್ತಿಯನ್ನಾಗಿ ಮಾಡಬೇಕು. ಹಿಂದೂ ಧರ್ಮವನ್ನು ಉಳಿಸುವ ಬೆಳೆಸುವ ಶಕ್ತಿ ಮಾತೆಯಾದವಳದ್ದು. ಮಕ್ಕಳು ದಾರಿ ತಪ್ಪುವ ವೇಳೆ ಸರಿಯಾದ ಮಾರ್ಗದರ್ಶನವನ್ನು ನೀಡಿ ಮಕ್ಕಳನ್ನು ಸರಿ ದಾರಿಗೆ ತರುವಲ್ಲಿ ತಾಯಿಯಾದವಳ ಪಾತ್ರ ಬಹುಮುಖ್ಯವಾದುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರಸು ಸಂಕಲ ದೈವಕ್ಷೇತ್ರ ಸಂತಡ್ಕ ಮಾಡದ ಅಧ್ಯಕ್ಷ ಡಾ. ಶ್ರೀಧರ ಭಟ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಕುಚಿತ ಮನೋಭಾವನೆಯನ್ನು ಬಿಟ್ಟು ಕೇತ್ರದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮದಲ್ಲಿ ಊರಪರವೂರ ಭಕ್ತಾದಿಗಳು ಪಾಲ್ಗೊಂಡು ತನುನಮದಿಂದ ಭಾಗವಹಿಸಬೇಕೇಂದರು. ಮಾತೃ ಮಂಡಳಿ ಅಧ್ಯಕ್ಷೆ ಕಮಲಾಕ್ಷಿ ಉಪಸ್ಥಿತರಿದ್ದರು. ಆಶಾಲತ ಬಿ.ಎಂ ಸ್ವಾಗತಿಸಿ, ಸಾಹಿತ್ ಶೆಟ್ಟಿ ವಂದಿಸಿದರು. ಸುಶ್ಮಿತಾ ಮಂಜುನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಧಾಕೃಷ್ಣ ಭಟ್ ಕೋಳ್ಯೂರು ಇವರ ದಿವ್ಯ ಹಸ್ತದಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ ಜರಗಿತು. ನಂತರ ಅನ್ನಸಂತರ್ಪಣೆ ಜರಗಿತು.

.jpg)
.jpg)
