ಕುಂಬಳೆ: ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟರ್ ಇಗರ್ಜಿಯ ವಾರ್ಷಿಕೋತ್ಸವ ವಿವಿಧ ಧಾಮಿರ್ಕ ಕಾರ್ಯಕ್ರಮಗಳೊಂದಿಗೆ ಜರುಗಿತು. ಸಮಾರಂಭದ ಅಂಗವಾಗಿ ದಿವ್ಯ ಬಲಿ ಪೂಜೆ ನಡೆಯಿತು. ವಂದನೀಯ ಧರ್ಮಗುರು ಸಂತೋಷ್ ರೋಡ್ರಿಗಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಸರಗೋಡು ಧರ್ಮವಲಯದ ಪ್ರಧಾನ ಧರ್ಮಗುರು ವಂದನೀಯ ಸ್ಟ್ಯಾನಿ ಪಿರೇರಾ, ಕಯ್ಯಾರು ಕ್ರಿಸ್ತರಾಜ ಇಗರ್ಜಿಯ ಧರ್ಮಗುರು ಫಾ. ವಿಶಾಲ್ ಮೋನಿಸ್, ಫಾ. ಮೆಲ್ವಿನ್ ಫೆರ್ನಾಂಡಿಸ್, ಫಾ. ಅರುಣ್‍ಡಿ ಸೋಜ, ಫಾ. ಪ್ರಶಾಂತ್ ಪಿಂಟೋ, ಫಾ. ವಿಜಯ್ ಡಿ ಸೋಜ, ಪೆರ್ಮುದೆ ಇಗರ್ಜಿಯ ಧರ್ಮಗುರು ಫಾ. ಹೆರಾಲ್ಡ್ ಡಿಸೋಜ, ಫಾ. ಕ್ಲೋಡ್ ಕೋರ್ಡಾ ಉಪಸ್ಥಿತರಿದ್ದರು. ದಿವ್ಯಬಲಿ ಪೂಜೆ ಬಳಿಕ ಮೆರವಣಿಗೆ ಮೂಲಕ ಸಾಗಿ ಸಂತ ಲಾರೆನ್ಸಾರ ಗ್ರೋಟ್ಟೋ ಮುಂದೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.


