ಕುಂಬಳೆ: ಸೂರಂಬೈಲು ಸಮೀಪದ ಶೆಡ್ರಂಪಾಡಿ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಧಾರ್ಮಿಕ, ವೈದಿಕ ವಿಧಿವಿಧಾನಗಳೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮ ಸಹಿತ ನಡೆಯಿತು. ನೂರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ಅನುಗ್ರಹ ಪಡೆದು ಧನ್ಯರಾದರು.
ಈ ಸಂದರ್ಭ ಪುಟಾಣಿ ಮಕ್ಕಳಿಗಾಗಿ ಶ್ರೀ ಕೃಷ್ಣವೇಶ ಸ್ಪರ್ಧೆ ನಡೆಯಿತು. ಭಾಗವಹಿಸಿದ ಎಲ್ಲಾ ಪುಟಾಣಿ ಮಕ್ಕಳಿಗೆ ದೇವಸ್ಥಾನದ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ ಕಾಸರಗೋಡು ಸಂಸ್ಥೆಯ ಸಾಂಸ್ಕøತಿಕ ಕಲಾ ವೈಭವ ಕಾರ್ಯಕ್ರಮ ವೈವಿಧ್ಯಮಯವಾಗಿ ನಡೆದು ನೆರೆದಿರುವ ಪ್ರೇಕ್ಷಕರನ್ನು ರಂಜಿಸಿತು. ಗುರುರಾಜ್ ಕಾಸರಗೋಡು ಅವರ ಸಂಯೋಜನೆ, ನಿರೂಪಣೆ ಹಾಗೂ ಗಾಯನದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವರ್ಷಾ ಶೆಟ್ಟಿ, ಶೈಲಜಾ ಹೊಳ್ಳ, ಹಂಶಿತ್ ಆಳ್ವ, ಉಷಾ ಸುಧಾಕರನ್, ಸಾನ್ವಿ ಆರ್ ರೈ, ಸಾತ್ವಿಕಾ ಎಸ್.ಕೆ., ಆರಾಧ್ಯ ಎಸ್. ಆಳ್ವ, ಕೌಶಿಕಾ, ಶ್ವೇತಾ ಹೊಳ್ಳ, ಅನಘ ಅಡಿಗ, ಜಯಪ್ರಭಾ, ಪ್ರಮೀಳಾ ಕೆ, ತುಳಸಿ ಅಡಿಗ, ಆಧ್ಯಾ, ಹೃತಿಕ, ಇಶಾನ್ ಆರ್.ಶೆಟ್ಟಿ, ಆಹಾನ್ ಎಸ್.ಆಳ್ವ, ಶ್ರೀತಿಕ್ ಎಸ್.ಕೆ., ತಾನ್ಯ ಆರ್. ಶೆಟ್ಟಿ, ದ್ರುವೀ ಎಸ್ ಶೆಟ್ಟಿ, ದೀಪ್ತಿ, ಆಶ್ವಿತಾ, ಸಿಯಾ ಶರಣ್, ಸಾಯಿ ಶರಣ್, ಅನ್ವಿತಾ ಅನಿಲ್, ತೇಜಸ್ ಹೊಳ್ಳ, ಧನ್ವಿ ರೈ, ಭಾನ್ವಿ ಕುಲಾಲ್, ಧನ್ವಿತ್ ಕುಲಾಲ್, ಶ್ರೀರಾಗ್, ಶ್ರೀಹಾನ್, ಸಾಯಿ ಪ್ರಣಮ್ಯ, ಸಾಯಿ ಪ್ರಣಾಮ್ ಮುಂತಾದ ಸಂಸ್ಥೆಯ ಕಲಾವಿದರು ಭಾಗವಹಿಸಿ ಯಶಸ್ವೀಗೊಂಡಿತು.
ದೇವಸ್ಥಾನದ ವತಿಯಿಂದ ಶ್ರೀ ದೇವರ ಪ್ರಸಾದ ನೀಡಿ ಎಲ್ಲಾ ಕಲಾವಿದರನ್ನು ಗೌರವಿಸಲಾಯಿತು. ಅಪ್ಪಣ್ಣ ಸೀತಾಂಗೋಳಿ, ದೇವಳದ ಸೇವಾ ಸಮಿತಿಯ ಅಧ್ಯಕ್ಷ ಶಂಕರನಾರಾಯಣ ಭಟ್, ಚೆನ್ನಪ್ಪಾಡಿ ಗೋಪಾಲಕೃಷ್ಣ ಭಟ್, ಶೈಲಜಾ, ಮುಂತಾದ ಗಣ್ಯರ ಸಮ್ಮುಖದಲ್ಲಿ ಭಾಗವಹಿಸಿದ ಸಂಸ್ಥೆಯ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಸೂರಂಬೈಲು ಶ್ರೀ ಗಣೇಶ ಮಂದಿರದಿಂದ ಶ್ರೀ ಕ್ಷೇತ್ರದ ವರೆಗೆ ಶ್ರೀಕೃಷ್ಣ ಜನ್ಮಾಷ್ಠಮಿಯ ಮೆರವಣಿಗೆ ನಡೆಯಿತು. ಮೊಸರು ಕುಡಿಕೆ ಹಬ್ಬವು ಅತ್ಯಂತ ವಿಜೃಂಭಣೆಯಿಂದ ನಡೆದು ಶ್ರೀ ಕೃಷ್ಣ ಜನ್ಮಾಷ್ಠಮಿಯ ಸಂಪನ್ನಗೊಂಡಿತು.

.jpg)
