ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರ ಶಾಸಕರ ನಿಧಿಯಿಂದ ನಿರ್ಮಿಸಿದ ಕಂಚಿಕಟ್ಟೆ- ಮಳಿ- ಅರಮನೆ ಕಾಂಕ್ರೀಟ್ ರಸ್ತೆಯನ್ನು ಭಾನುವಾರ ಮಂಜೇಶ್ವರ ಶಾಸಕ ಎ.ಕೆ.ಎಂ. ಆಶ್ರಫ್ ಉದ್ಘಾಟಿಸಿದರು.
ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸಫ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ರೆಹಮಾನ್ ಅರಿಕ್ಕಾಡಿ. ಸಬೂರ, ವಾರ್ಡು ಸದಸ್ಯೆ ಪ್ರೇಮಾವತಿ, ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ, ಯುಡಿಎಫ್ ನ ವಿಧಾನಸಭಾ ಕ್ಷೇತ್ರ ಸಂಚಾಲಕ ಮಂಜುನಾಥ ಆಳ್ವ ಮಡ್ವ, ಸಿಪಿಎಂ ನ ಹಿರಿಯ ನಾಯಕ ರಾಮಚಂದ್ರ ಗಟ್ಟಿ, ಕಾಂಗ್ರೆಸ್ ನ ನಾಯಕರುಗಳಾದ ಲಕ್ಷ್ಮಣ ಪ್ರಭು ಕುಂಬಳೆ, ಸುಂದರ ಅರಿಕ್ಕಾಡಿ, ರವಿ ಪೂಜಾರಿ, ಪೃಥ್ವಿರಾಜ್ ಶೆಟ್ಟಿ, ಡಾಲ್ಫಿ ಡಿಸೋಜಾ., ವಾರ್ಡ್ ಸಮಿತಿಯ ಅಧ್ಯಕ್ಷ ಥಾಮಸ್ ರೋಡ್ರಿಗಸ್, ಚಿರಂಜೀವಿ ಕ್ಲಬ್ ನ ಅಧ್ಯಕ್ಷ ಕೃಷ್ಣ ಗಟ್ಟಿ ಹಾಗೂ ಸದಸ್ಯರುಗಳು, ಸತೀಶ್ ಪೂಜಾರಿ, ವಿಶ್ವನಾಥ ಶೆಟ್ಟಿ. ಗುರುವಪ್ಪ. ಫಾರೂಕ್ ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು. ನಾರಾಯಣ ಪೂಜಾರಿ ಸ್ವಾಗತಿಸಿ, ಮುನೀರ್ ಮಳಿ ವಂದಿಸಿದರು.

.jpg)
