ಕುಂಬಳೆ: ನೂತನ ಕಟ್ಟಡ ನಿರ್ಮಾಣವಾಗಿದ್ದರೂ ಅಧಿಕಾರಿಗಳ ನಿರಾಸಕ್ತಿಯಿಂದ ಅಂಗಡಿಮೊಗರು ಕುಟುಂಬ ಆರೋಗ್ಯ ಕೇಂದ್ರ ಇನ್ನೂ ಕಾರ್ಯನಿರ್ವಹಿಸದಿರುವುದನ್ನು ಖಂಡಿಸಿ ಯುಡಿಎಫ್ ಪುತ್ತಿಗೆ ಪಂಚಾಯತಿ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ನಡೆಸಲಾಯಿತು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಜೆ.ಎಸ್. ಸೋಮಶೇಖರ ಕಾರ್ಯಕ್ರಮ ಉದ್ಘಾಟಿಸಿದರು.
ಸುಲೈಮಾನ್ ಊಜಂಪದವು ಅಧ್ಯಕ್ಷತೆ ವಹಿಸಿದ್ದರು. ಹಾದಿ ತಂಙಳ್ ಮುಖ್ಯ ಭಾಷಣ ಮಾಡಿದರು. ಮುಖಂಡ ಅಬ್ದುಲ್ಲ ಕಂಡತ್ತಿಲ್, ಪಂಚಾಯತಿ ಸದಸ್ಯರಾದ ಆಸಿಫ್ ಅಲಿ ಕಾಂತಲ, ಕೇಶವ ಎಸ್.ಆರ್., ಇ.ಕೆ.ಮಹಮ್ಮದ್ ಕುಂಞÂ್ಞ, ಕಮರುದ್ದೀನ್ ಪಾಡ್ಲಡ್ಕ, ಶನೀದ್ ಕಯ್ಯಂಕೂಡೆಲು, ಬದರುದ್ದೀನ್ ಕಂಡತ್ತಿಲ್, ಜುನೈದ್ ಉರ್ಮಿ, ಸಿದ್ದೀಕ್ ವಳಮುಗೇರು, ಸಲೀಂ ಪುತ್ತಿಗೆ, ಕುಂಞÂ್ಞ ಕಯ್ಯಂಕೂಡೆಲು, ರಫೀಕ್ ಕೆ.ಪಿ.ಎಂ., ಅಬ್ದುರಹ್ಮಾನ್ ಬೆದ್ರೋಡಿ, ದಯಾನಂದ ಬಾಡೂರು, ಸಂಜೀವ ಬಾಡೂರು, ಸಲೀಂ ಪುತ್ತಿಗೆ ನೇತೃತ್ವ ವಹಿಸಿದ್ದರು.
ಪುತ್ತಿಗೆ ಪಂಚಾಯತಿಯ ಅರಿಯಪ್ಪಾಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಂಗಡಿಮೊಗರಿಗೆ ಸ್ಥಳಾಂತರಿಸಿ ನೂತನ ಕೇಂದ್ರ ನಿರ್ಮಾಣವು 2020-21ರ ಆರ್ಥಿಕ ವರ್ಷದಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಿಂದ 85 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಂಡಿತು. 2024ರ ಮಾ.4 ರಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಆನ್‍ಲೈನ್‍ನಲ್ಲಿ ಉದ್ಘಾಟಿಸಿದ ಅಂಗಡಿಮೊಗರು ಕುಟುಂಬ ಆರೋಗ್ಯ ಕೇಂದ್ರದ ಹೊಸ ಕಟ್ಟಡವು ಪಂಚಾಯತಿ ಆಡಳಿತ ಸಮಿತಿಯ ನಿರ್ಲಕ್ಷ್ಯದಿಂದಾಗಿ ಶಿಥಿಲಗೊಂಡಿದೆ. ಪ್ರಯೋಗಾಲಯ, ಎಕ್ಸ್-ರೇ ಘಟಕ, ಪೀಠೋಪಕರಣಗಳು ಮತ್ತು ಇತರ ಮೂಲ ಸೌಲಭ್ಯಗಳನ್ನು ಒದಗಿಸಲು ಪಂಚಾಯತಿ ನಿಧಿಯನ್ನು ಬಳಸುವುದಾಗಿ ಭರವಸೆ ನೀಡಿದ್ದ ಪಂಚಾಯತಿ ಆಡಳಿತ ಸಮಿತಿ, ಕಟ್ಟಡದ ಕಾರ್ಯನಿರ್ವಹಣೆಯಲ್ಲಿ ವಿಳಂಬಕ್ಕೆ ಹಣ ಬಿಡುಗಡೆಯಾಗದ ಕಾರಣ ಎಂದು ಆರೋಪಿಸಿದೆ.

.jpg)
