ಬದಿಯಡ್ಕ: ಯುವಕೇಸರಿ ಆಟ್ರ್ಸ್ ಅಂಡ್ ಸ್ಪೋಟ್ರ್ಸ್ ಕ್ಲಬ್ ಕಿಳಿಂಗಾರ್ ಇದರ ವತಿಯಿಂದ ಗಣೇಶೋತ್ಸವದ ಪ್ರಯುಕ್ತ ಚಿತ್ರ ರಚನೆ ಸ್ಫರ್ಧೆ ಕಿಳಿಂಗಾರ್ ಶಾಲೆಯಲ್ಲಿ ಕ್ಲಬ್ಬಿನ ಅಧ್ಯಕ್ಷ ರಾಮ ಬಿ. ಅವರ ಅಧ್ಯಕ್ಷತೆಯಲ್ಲಿ ಜರಗಿತು. ಶಿಕ್ಷಕಿ ಸಹನ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಏಕಲವ್ಯ ಬಾಲಗೋಕುಲದ ಮಾತಾಶ್ರೀ ಜಯಶ್ರೀ ಯನ್ ಬೇಳ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಯಜ್ಞ ಕುಮಾರ್ ಅನ್ನೆಪಲ್ಲಡ್ಕ, ವಸಂತ, ಅಶೋಕ, ಸುಧಾಕರ, ರಂಜಿತ್, ಪ್ರವೀಣ್, ಸಂತೋಷ್, ಪ್ರಕಾಶ್, ಜಯರಾಜ್ ಹಾಗೂ ಏಕಲವ್ಯ ಬಾಲಗೋಕುಲದ ಪುಟಾಣಿಗಳು ಉಪಸ್ಥಿತರಿದ್ದರು. ಚಿತ್ರ ರಚನೆ ಸ್ಫರ್ಧೆಯ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ವಿಜೇಶ್ ಯನ್, ಯಂ ಎಸ್ ಸಿ ಯಚ್ ಎಸ್ ನೀರ್ಚಾಲ್, ದ್ವಿತೀಯ ಯಶಿಕ ಸಿ.ಎಸ್. ಜಿ ಯಚ್ ಎಸ್ ಸೂರಂಬೈಲ್, ತೃತೀಯ ತನುಶ್ ಸಿ.ಎಸ್. ಜಿ ಯಚ್ ಎಸ್ ಸೂರಂಬೈಲ್, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಅಭಿಷೇಕ್ ಎ, ಯಂ.ಎಸ್.ಸಿ.ಯಸ್.ಯಸ್. ನೀರ್ಚಾಲ್, ದ್ವಿತೀಯ ಅರ್ಚನಾ ಬಿ ಸೈಂಟ್ ಮೇರೀಸ್ ಬೇಳ, ತೃತೀಯ ವೈಷ್ಣವ್ ಪಿ. ಯಂ.ಎಸ್.ಸಿ.ಯಸ್.ಎಸ್ ನೀರ್ಚಾಲ್, ಹೈಸ್ಕೂಲ್ ವಿಭಾಗ ಯಂ.ಎಸ್.ಸಿ.ಯಚ್.ಎಸ್. ನೀರ್ಚಾಲ್ ಶಾಲೆಯ ವಿಷ್ಣು ಯನ್, ಚಂಪಕ ಯಂ, ಪ್ರಜ್ಯೋತ್ ಆರ್ ಕ್ರಮವಾಗಿ ಪ್ರಥಮ ದ್ವಿತೀಯ, ತೃತೀಯ ಸ್ಥಾನವನ್ನು ಪಡೆದರು. ಸಾರ್ವಜನಿಕ ವಿಭಾಗದಲ್ಲಿ ವೈಷ್ಣವಿ ಬಹುಮಾನಕ್ಕೆ ಅರ್ಹರಾದರು. ಕ್ಲಬ್ಬಿನ ಕಾರ್ಯದರ್ಶಿ ಮನೋಜ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶ್ರೀಜಿತ್ ವಂದಿಸಿದರು.ಕ್ಲಬ್ಬಿನ ಸಂಚಾಲಕ ನಾರಾಯಣ ಪಿ. ಪೆರಡಾಲ ಕಾರ್ಯಕ್ರಮ ನಿಎರೂಪಿಸಿದರು.

.jpg)
