HEALTH TIPS

ನೀರ್ಚಾಲಲ್ಲಿ ರಂಜಿಸಿದ ತಾಳಮದ್ದಳೆ

ಬದಿಯಡ್ಕ: ನೀರ್ಚಾಲಿನ ವಿಘ್ನೇಶ್ವರ ಯಕ್ಷಗಾನ ಕಲಾಸಂಘದ ನೇತೃತ್ವದಲ್ಲಿ ಭಾನುವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆ ಆವರಣದಲ್ಲಿ ಕಚ-ದೇವಯಾನಿ ಯಕ್ಷಗಾನ ತಾಳಮದ್ದಳೆ ನಡೆಯಿತು.


ಸಮಾರಂಭವನ್ನು ಖ್ಯಾತ ಅರ್ಥಧಾರಿ, ಲೇಖಕ ರಾಧಾಕೃಷ್ಣ ಕಲ್ಚಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅಗಲಿದ ಹಿರಿಯ ಕಲಾವಿದ ಪಕಳಕುಂಜ ಶಾಮ ಭಟ್ ಅವರಿಗೆ ಈ ಸಂದರ್ಭ ನುಡಿ ನಮನ ಸಲ್ಲಿಸಿ ಮಾತನಾಡಿದರು. ವಿಘ್ನೇಶ್ವರ ಯಕ್ಷಗಾನ ಕಲಾಸಂಘದ ಸತ್ಯಶಂಕರ ಭಟ್, ವಿಷ್ಣು ಶರ್ಮ ನೂಜಿ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ನಡೆದ ತಾಳಮದ್ದಳೆಯ ಹಿಮ್ಮೇಳದಲ್ಲಿ ಹೊಸಮೂಲೆ ಗಣೇಶ ಭಟ್, ತಲ್ಪನಾಜೆ ವೆಂಕಟರಮಣ ಭಟ್(ಭಾಗವತಿಕೆ), ಉದಯ ಕಂಬಾರ್, ಲವಕುಮಾರ ಐಲ(ಚೆಂಡೆ-ಮದ್ದಳೆ)ಯಲ್ಲಿ ಸಹಕರಿಸಿದರು. ಮುಮ್ಮೇಳದಲ್ಲಿ ಉಜಿರೆ ಅಶೋಕ ಭಟ್, ರಾಧಾಕೃಷ್ಣ ಕಲ್ಚಾರ್, ಪವನ್ ಕಿರಣ್ಕೆರೆ, ಸದಾಶಿವ ಆಳ್ವ ತಲಪಾಡಿ, ಬಾಲಕೃಷ್ಣ ಆಚಾರ್ಯ ನೀರ್ಚಾಲು ಪಾತ್ರಗಳನ್ನು ನಿರ್ವಹಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries