ಕಾಸರಗೋಡು: ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಿರುವ ಹಲವಾರು ಸವಲತ್ತುಗಳನ್ನು ಸದ್ಬಳಕೆಮಾಡಿಕೊಳ್ಳುವ ಮೂಲಕ, ಶೈಕ್ಷಣಿಕವಾಗಿ ಮುಂಚೂಣಿಗೆ ಬರಬೇಕು ಎಂಬುದಾಗಿ ಕಾಸರಗೋಡು ಕಂದಾಯ ಜಿಲ್ಲಾ ಶಿಕ್ಷಣಾಧಿಕಾರಿ ಸವಿತ. ಪಿ ತಿಳಿಸಿದ್ದಾರೆ.
ಅವರು ಕಾಸರಗೋಡಿನ 'ಕನ್ನಡ ಅಧ್ಯಾಪಕ ಭವನ'ದಲ್ಲಿ ನಡೆದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾಸರಗೋಡು, ಬೇಕಲ- ಹೊಸದುರ್ಗ ಉಪಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಕಾಸರಗೋಡು ಉಪಜಿಲ್ಲಾ ಸಮಿತಿ ಅಧ್ಯಕ್ಷೆ ಯಶೋದ ಕೆ.ಎ ಅಧ್ಯಕ್ಷತೆ ವಹಿಸಿದರು. ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ಕೆ. ಪುಂಡರೀಕಾಕ್ಷ ಆಚಾರ್ಯ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ವಿಶಾಲಾಕ್ಷ ಪುತ್ರಕಳ, ನಿವೃತ್ತ ಮುಖ್ಯಶಿಕ್ಷಕಿ ಶೋಭಾರಾಣಿ , ಕೇಂದ್ರ ಸಮಿತಿ ಅಧಿಕೃತ ವಕ್ತಾರ ಜಬ್ಬಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೇಂದ್ರ ಸಮಿತಿ ಉಪಾಧ್ಯಕ್ಷೆ ಶ್ರೀಲತಾ .ಕೆ, ಕೇಂದ್ರ ಸಮಿತಿ ಲೆಕ್ಕ ಪರಿಶೋಧಕ ವಿಠಲ ಅಡ್ವಳ, ಬೇಕಲ ಹೊಸದುರ್ಗ ಉಪಜಿಲ್ಲಾ ಅಧ್ಯಕ್ಷೆ ರಜನಿ ಕುಮಾರಿ ಉಪಸ್ಥಿತರಿದ್ದರು. ಈ ಸಂದರ್ಭ ಜಿಲ್ಲಾ ಶಿಕ್ಷಣಾಧಿಕಾರಿ ಸವಿತ . ಪಿ ಅವರನ್ನು ಅಭಿನಂದಿಸಲಾಯಿತು. 2024-25 ನೇ ಶೈಕ್ಷಣಿಕ ವರ್ಷದಲ್ಲಿ ಎಲ್ಲೆಸ್ಸೆಸ್ ಮತ್ತು ಯುಎಸ್ಸೆಸ್ ವಿಜೇತರಾದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹಾಗೂ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಸ್ಮರಣಾರ್ಥ ಶಾಲಾ ಮಟ್ಟದಲ್ಲಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಕೆಂದ್ರ ಸಮಿತಿ ಅಧಿಕೃತ ವಕ್ತಾರ ಬಾಬು.ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಸರಗೋಡು ಉಪಜಿಲ್ಲಾ ಸಮಿತಿ ಉಪಾಧ್ಯಕ್ಷೆ ಸುರೇಖಾ.ಕೆ ಸ್ವಾಗತಿಸಿದರು. ಕೇಂದ್ರ ಸಮಿತಿ ಜತೆ ಕಾರ್ಯದರ್ಶಿ ಪ್ರದೀಪ್. ಕೆ.ವಿ ಕಾರ್ಯಕ್ರಮ ನಿರೂಪಿಸಿದರು.ಬೇಕಲ ಹೊಸದುರ್ಗ ಉಪಜಿಲ್ಲಾ ಕಾರ್ಯದರ್ಶಿ ಧನ್ಯಶ್ರೀ ವಂದಿಸಿದರು.ಈ ಸಂದರ್ಭ ನಡೆದ ಪ್ರತಿನಿಧಿ ಸಮ್ಮೇಳನದಲ್ಲಿ ಕಾಸರಗೋಡು ಉಪಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ಮತ್ತು ಬೇಕಲ ಹೊಸದುರ್ಗ ಕಾರ್ಯದರ್ಶಿ ಧನ್ಯಶ್ರೀ ವರದಿ ಮಂಡಿಸಿದರು. ಕೋಶಾಧಿಕಾರಿಗಳಾದ ಕುಶ .ಪಿ.ಎಎಲ್ ಮತ್ತು ಶ್ರೀವಿದ್ಯಾ ಲೆಕ್ಕಪತ್ರ ಮಂಡಿಸಿದರು. ಕೇಂದ್ರ ಸಮಿತಿ ಜತೆ ಕಾರ್ಯದರ್ಶಿ ವಿನೋದ್ ರಾಜ್, ಲೆಕ್ಕ ಪರಿಶೋಧಕ ವಿಠಲ ಅಡ್ವಳ, ಉಪಾಧ್ಯಕ್ಷೆ ಶ್ರೀಲತಾ .ಕೆ, ಉಪಜಿಲ್ಲಾ ಸಮಿತಿ ಅಧ್ಯಕ್ಷ ಯಶೋದ ಕೆ.ಎ, ರಜನಿ ಕುಮಾರಿ ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾಸರಗೋಡು ಉಪಜಿಲ್ಲಾ ಅಧ್ಯಕ್ಷರಾಗಿ ಕುಶ .ಪಿ.ಎಲ್ , ಉಪಾಧ್ಯಕ್ಷರಾಗಿ ರೋಹಿತಾಕ್ಷಿ ಕೆ.ಬಿ, ಮತ್ತು ವಿಜಯ ಕುಮಾರಿ , ಕಾರ್ಯದರ್ಶಿಯಾಗಿ ಪೂರ್ಣಿಮಾ , ಜತೆ ಕಾರ್ಯದರ್ಶಿಗಳಾಗಿ ಕವಿತಾ , ನಿರೀಕ್ಷಾ ಕೋಶಾಧಿಕಾರಿಯಾಗಿ ಸುರೇಖಾ .ಕೆ ಆಯ್ಕೆಯಾದರು. ಬೇಕಲ ಹೊಸದುರ್ಗ ಉಪಜಿಲ್ಲಾ ಅಧ್ಯಕ್ಷರಾಗಿ ವಿಠಲ ಅಡ್ವಳ, ಕಾರ್ಯದರ್ಶಿಯಾಗಿ ಧನ್ಯಶ್ರೀ, ಜತೆ ಕಾರ್ಯದರ್ಶಿಯಾಗಿ ಜೀನಾ , ಕೋಶಾಧಿಕಾರಿಯಾಗಿ ರಾಜೇಶ್ ಅವರನ್ನು ಆಯ್ಕೆ ಮಾಡಲಾಯಿತು.


