ಕಾಸರಗೋಡು: ಚೆರ್ಕಳ ಸನಿಹದ ಪಾಡಿ ಮೇಲಿನಮನೆ ಕಮಲೋನ್ ತರವಾಡು ಟ್ರಸ್ಟ್‍ನ ಕುಟುಂಬ ಸಮ್ಮಿಲನ, ಸನ್ಮಾನ ಸಮಾರಂಭ ತರವಾಡು ಮನೆಯಲ್ಲಿ ಜರುಗಿತು. ಕಾರ್ಯಕ್ರಮ, ಸಂಘಟನೆ ಮಾಜಿ ಅಧ್ಯಕ್ಷ ಪಿ.ಕೆ.ನಾರಾಯಣನ್ ನಾಯರ್ ಪಾನೂರ್ ಸಮಾರಂಭ ಉದ್ಘಾಟಿಸಿದರು. ಕೆ. ಕುಞÂಕೃಷ್ಣನ್ ನಾಯರ್ ಕಾಟ್ಟುಕೊಚ್ಚಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾಜಿ ಅಧ್ಯಕ್ಷ ನಾರಾಯಣನ್ ನಾಯರ್ ಮತ್ತು ಇತರ ಟ್ರಸ್ಟ್ ಸದಸ್ಯರನ್ನು ಸನ್ಮಾನಿಸಲಾಯಿತು. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ತರವಾಡು ಸಮಿತಿ ಸದಸ್ಯರು ಹಾಗೂ ಮಕ್ಕಳನ್ನು ಅಭಿನಂದಿಸಲಾಯಿತು.
ಸಭೆಯಲ್ಲಿ ಕೆ ಕುಞಂಬು ಮಾಸ್ಟರ್ ಕೊಲ್ಲಂಪಾಡಿ, ಗೋಪಾಲನ್ ನಾಯರ್ ಚೆಮ್ನಾಡ್, ಸೇತು ಮಾಧವನ್ ನಂಬಿಯಾರ್ ಮಲ್ಲಂ, ನರಾಘವನ್ ನಾಯರ್ ಪ್ಲಾವಿಲಕ್ಕಾಯ, ಮುರಳೀಧರನ್ ಕಾನತ್ತೂರು, ಬಾಲಕೃಷ್ಣನ್ ನಾಯರ್ ಕವರಂಕೋಲ್ ಉಪಸ್ಥಿತರಿದ್ದರು. ಕೆ. ಮೋಹನ್ ಕುಮಾರ್ ಸ್ವಾಗತಿಸಿದರು. ಬಾಲಕೃಷ್ಣನ್ ಕವರಂಕೋಲ್ ವಂದಿಸಿದರು.


