ಕಾಸರಗೋಡು: ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ವೆಸ್ಟ್ ಯೂನಿಟ್ ವತಿಯಿಂದ ಸ್ವಾತಂತ್ರ್ಯ ದಿನವನ್ನು ಕಾಸರಗೋಡು ಮಧೂರು ಬಳಿ ಪರಕ್ಕಿಲದ ಅಂಗನವಾಡಿಯಲ್ಲಿ ಜರುಗಿತು. ಈ ಸಂದರ್ಭ ಅಂಗನವಡಿ ಮಕ್ಕಳಿಗೆ ತ್ರಿವರ್ಣ ಧ್ವಜ ಹಾಗೂ ಸಿಹಿ ತಿನಿಸು ವಿತರಿಸಲಾಯಿತು.
ಮಧೂರು ಪಂಚಾಯಿತಿ 18ನೇ ವಾರ್ಡ್ ಸದಸ್ಯ ಬಶೀರ್ ಧ್ವಜಾರೋಹಣ ನಡೆಸಿದರು. ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ, ಕಾರ್ಯದರ್ಶಿ ವಿಶಾಖ್, ಕೋಶಾಧಿಕಾರಿ ಗಣೇಶ್ ರೈ, ನಿವೃತ್ತ ತಹಶಿಲ್ದಾರ್ ತರುಣ ಕಲಾವೃಂದದ ಹಿರಿಯ ಕಾರಯಕರ್ತ ಬಾಲಕೃಷ್ಣ, ತರುಣ ಕಲಾ ವೃಂದದ ಅಧ್ಯಕ್ಷ ಸುರೇಶ್, ಆಶಾ ಕಾರ್ಯಕರ್ತೆ ಮೈಮೂನ ಹಾಗೂ ಮಕ್ಕಳ ಪೆÇೀಷಕರು ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ವಿಮಲಾ ಸ್ವಾಗತಿಸಿದರು.

