ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಮಧ್ಯೆ ಅವೈಜ್ಞಾನಿಕವಾಗಿ ಹಾಗೂ ಹೆದ್ದಾರಿ ಕಾನೂನುಗಳನ್ನು ಮೀರಿ ಕುಂಬಳೆಯಲ್ಲಿ ತಾತ್ಕಾಲಿಕ ಟೋಲ್ ಗೇಟ್ ನಿರ್ಮಾಣದ ವಿರುದ್ಧ ಬಿಜೆಪಿ ಕುಂಬಳೆ ಮಂಡಲ ಸಮಿತಿಯು ಕೇಂದ್ರ ಸಾರಿಗೆ ಸಚಿವರಿಗೆ ದೂರು ನೀಡಿದೆ. ನ್ಯಾಯಾಲಯದ ತೀರ್ಪಿನ ಮೂಲಕ ಟೋಲ್ ಗೇಟ್ ಅಸ್ತಿತ್ವಕ್ಕೆ ಬಂದರೆ, ಸದರಿ ಟೋಲ್ ಗೇಟ್ ವ್ಯಾಪ್ತಿಯ ಕುಂಬಳೆ, ಪುತ್ತಿಗೆ, ಮಂಗಲ್ಪಾಡಿ ಪಂಚಾಯತಿಗಳು ಮತ್ತು ಇತರ ಭಾಗಗಳಲ್ಲಿ ನಿಯಮಿತವಾಗಿ ಸಂಚರಿಸುವ ಎಲ್ಲಾ ವಾಹನಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಕೇಳಿದೆ. ದೂರನ್ನು ಪರಿಹರಿಸಲು ದೆಹಲಿಗೆ ತೆರಳಿ ಸಚಿವರನ್ನು ಖುದ್ದಾಗಿ ಭೇಟಿಯಾಗುವ ತೀರ್ಮಾನಿಸಲಾಗಿದೆ . ಜನರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಬಿಜೆಪಿ ಮುಂಚೂಣಿಯಲ್ಲಿರುತ್ತದೆ ಎಂದು ಬಿಜೆಪಿ ಕುಂಬಳೆ ಮಂಡಲ ಸಮಿತಿ ಅಧ್ಯಕ್ಷ ಸುನಿಲ್ ಅನಂತಪುರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

