ಕುಂಬಳೆ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಸಹಯೋಗದೊಂದಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಗುರುವಾರ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾದಕದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅಬಕಾರಿ ವಿಭಾಗದ ಅಧಿಕಾರಿ ಜನಾರ್ದನ್ ಇವರು ವಿಶೇಷ ಮಾಹಿತಿಯನ್ನು ಒದಗಿಸಿದರು. ಮಾದಕವಸ್ತುಗಳು ಮನುಷ್ಯನ ಜೀವನವನ್ನು ಹೇಗೆ ನಾಶಮಾಡಬಹುದೆಂದು ಉದಾಹರಣೆಗಳ ಮೂಲಕ ವಿವರಿಸಿ, ಸ್ವಸ್ಥ ಜೀವನ ನಡೆಸುವ ಸಂಕಲ್ಪ ವಿದ್ಯಾರ್ಥಿ ಜೀವನದಿಂದಲೇ ಮಾಡಬೇಕಾದ ಅನಿವಾರ್ಯತೆಯನ್ನು ಪ್ರಸ್ತುತ ಪಡಿಸಿಸಿದರು.
ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಪುಣಿಯೂರು, ಗ್ರಾಮಾಭಿವೃಧ್ದಿ ಯೋಜನೆಯ ಮೇಲ್ವಿಚಾರಕ ಅಭಿಷೇಕ್, ಒಕ್ಕೂಟದ ಅಧ್ಯಕ್ಷೆ ಜಯಂತಿ, ಸೇವಾ ಪ್ರತಿನಿಧಿü ಸ್ವರ್ಣಲತಾ ಹಾಗೂ ಶಾಲಾ ಮುಖ್ಯ ಶಿಕ್ಷಕ ಶ್ಯಾಮ್ ಭಟ್ ದರ್ಭೆಮಾರ್ಗ ಉಪಸ್ಥಿತರಿದ್ದರು. ಶಿಕ್ಷಕ ಹರಿಪ್ರಸಾದ್ ಕಾರ್ಯಕ್ರಮವನ್ನು ನಿರ್ವಹಿಸಿದರು.

.jpg)
.jpg)
