ಮುಳ್ಳೇರಿಯ: ಮವ್ವಾರು ಶ್ರೀ ಷಡಾನನ ಗ್ರಂಥಾಲಯ ಹಾಗೂ ಯೂತ್ ಕ್ಲಬ್ ನೇತೃತ್ವದಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಗ್ರಂಥಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಸೈನಾ?ಕಾರಿ ಕೃಷ್ಣ ಮಣಿಯಾಣಿ ಮಲ್ಲಮೂಲೆ ಧ್ವಜಾರೋಹಣಗೈದರು. ಬಳಿಕ ಮಾತನಾಡಿ, ಭಾರತವು ಜಗತ್ತಿನ್ನೇ ಮುನ್ನಡೆಸುವ ಶಕ್ತಿ ಹೊಂದಿರುವ ದೇಶವಾಗಿದೆ. ಬ್ರಿಟೀಷರಿಂದ ಸ್ವಾತಂತ್ರ್ಯ ಲಭಿಸಿದ ಬಳಿಕ ದೇಶದ ಹಿತಾಶಕ್ತಿಯನ್ನು ಕಾಪಾಡುವಲ್ಲಿ ಸೇನೆಯು ಪ್ರಮುಖ ಪಾತ್ರವನ್ನು ವಹಿಸಿದೆ. ಇನ್ನು ಸ್ವಾತಂತ್ರ್ಯವನ್ನು ಉಳಿಸಿಕೊಂಡು ನಮ್ಮ ಮಕ್ಕಳಿಗೆ ಅದರ ಕುರಿತು ತಿಳಿಸಬೇಕಾದ ಅನಿವಾ???ಯತೆಯ ಕುರಿತು ಹೇಳಿದರು. ಗ್ರಂಥಾಲಯ ಸದಸ್ಯ ಗಂಗಾಧರ ರೈ ಮಠದಮೂಲೆ ಮಾತನಾಡಿದರು. ಗ್ರಂಥಾಲಯ ಅಧ್ಯಕ್ಷ ಕೆ.ಗಂಗಾಧರ್, ಪ್ರಧಾನ ಕಾರ್ಯದರ್ಶಿ ಚಾತುಕುಟ್ಟಿ ಮಾಸ್ಟರ್, ಉಪಾಧ್ಯಕ್ಷ ವಿಷ್ಣು ಭಟ್, ಸೀತಾರಾಮ ಭಟ್, ಕೃಷ್ಣಮೂರ್ತಿ, ಗಣಪತಿ ಭಟ್ ಮತ್ತಿತ್ತರರು ಭಾಗವಹಿಸಿದರು.

.jpg)
