ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಕೇಂದ್ರೀಯ ಶೈಕ್ಷಣಿಕ ತಂತ್ರಜ್ಞಾನ ಸಂಸ್ಥೆ (ಸಿಐಇಟಿ)ಎನ್‍ಸಿಇಆರ್‍ಟಿಗಳ ಜಂಟಿ ಸಹಯೋಗದೊಂದಿಗೆ ಮೂರು ದಿವಸಗಳ ಶಿಕ್ಷಕರ ತರಬೇತಿ ಕಾರ್ಯಕ್ರಮ ವಿಶ್ವ ವಿದ್ಯಾಳಯದ ನೀಲಗಿರಿ ಅತಿಥಿ ಗೃಹದಲ್ಲಿ ಆರಂಭಗೊಂಡಿತು.
ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನ ಇಂದು ಸಾಮಾನ್ಯ ಜನರಿಗೆ ಸೇರಿದಂತೆ ಎಲ್ಲರಿಗೂ ಲಭ್ಯವಿದ್ದು, ಬೋಧನೆ ಮತ್ತು ಕಲಿಕೆಯ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಶಿಕ್ಷಣವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ತಿಳಿಸಿದರು. ಸಿಐಇಟಿ ಪ್ರಾಧ್ಯಾಪಕ ಡಾ. ಶಿರೀಶ್ ಪಾಲ್ ಸಿಂಗ್ ಮುಖ್ಯ ಭಾಷಣ ಮಾಡಿದರು. ಸಮಗ್ರ ಶಿಕ್ಷಕ ಶಿಕ್ಷಣ ವಿಭಾಗದ ಮುಖ್ಯಸ್ಥ ಪೆÇ್ರ. ಮುಹಮ್ಮದುನ್ನಿ ಎಲಿಯಾಸ್ ಮುಸ್ತಫಾ, ಪೆÇ್ರ. ಅಮೃ ಜಿ. ಕುಮಾರ್ ಉಪಸ್ಥಿತರಿದ್ದರು. ಶಿಕ್ಷಣ ಇಲಾಖೆಯ ಅಧ್ಯಕ್ಷ ಪೆÇ್ರ. ವಿ.ಪಿ. ಜೋಶಿತ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಡಾ. ಮೇರಿ ವಿನೀತಾ ಥಾಮಸ್ ವಂದಿಸಿದರು. ಶಾಲಾ ಮತ್ತು ಕಾಲೇಜು ಶಿಕ್ಷಕರು ಮತ್ತು ಸಂಶೋಧಕರು ಭಾಗವಹಿಸಿದ್ದ ಈ ಕಾರ್ಯಕ್ರಮ ಸೆ. 19ರಂದು ಸಮಾರೋಪಗೊಳ್ಳಲಿದೆ. ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಬೋಧನೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ತರಬೇತಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ.


