ಕಾಸರಗೋಡು: ಡೇಟಿಂಗ್ ಆ್ಯಪ್ ಮೂಲಕ ಪರಿಚಯಮಾಡಿಕೊಂಡು ಹದಿನಾರರ ಹರೆಯದ ಬಾಲಕನಿಗೆ ಕಿರುಕುಳ ನೀಡಿರುವ ಪ್ರಕರಣದಲ್ಲಿ ಲಕ್ಷಾಂತರ ರೂ. ವ್ಯವಹಾರ ನಡೆದಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಬಾಲಕನನ್ನು ಕೆಲವೊಂದು ವಸತಿಗೃಹಗಳಿಗೆ ಕರೆದೊಯ್ದು ಕಿರುಕುಳ ನೀಡಿರುವಲ್ಲಿ ಭಾರೀ ಹಣದ ವ್ಯವಹಾರ ನಡೆದಿರುವುದನ್ನು ಹಾಗೂ ಕೆಲವೊಂದು ವಸತಿಗೃಹದ ಮಾಲಿಕರೂ ಈ ದಂಧೆಯಲ್ಲಿ ಶಾಮೀಲಾಗಿರುವುದನ್ನು ಪತ್ತೆಹಚ್ಚಲಾಗಿದೆ. ಸಲಿಂಗ ಕಿರುಕುಳ ನಡೆದಿರುವ ವಸತಿಗಹಗಳಿಂದ ಚಂದೇರ ಠಾಣೆ ಪೊಲೀಸರು ಮಾಹಿತಿ ಸಂಗ್ರಹಿಸಲಾರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಚೆರ್ವತ್ತೂರಿನ ವಸತಿಗೃಹಕ್ಕೆ ತೆರಳಿ ಪೊಲೀಸರು ಮಾಹಿತಿ ಸಂಗ್ರಹಿಸಿದರು. ಕಾಸರಗೋಡು ಅಲ್ಲದೆ, ಕಣ್ಣೂರು, ಕೋಯಿಕ್ಕೋಡು, ಎರ್ನಾಕುಳಂ ಜಿಲ್ಲೆಗಳಲ್ಲೂ ಬಾಲಕಗೆ ಸಲಿಂಗ ಕಿರುಕುಳ ನೀಡಿರುವ ಬಗ್ಗೆ ಪ್ರತ್ಯೇಕ ಕೇಸು ದಾಖಲಾಗಿದೆ. ಅಲ್ಲಿಗೂ ತೆರಳಿ ಮಾಹಿತಿ ಸಂಗ್ರಹಿಸಲು ಪೊಲೀಸರು ಮುಂದಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಚೆರ್ವತ್ತೂರು ಶೈಕ್ಷಣಿಕ ಉಪಜಿಲ್ಲಾ ಶಿಕ್ಷಣಾಧಿಕಾರಿ, ಪಡನ್ನ ನಿವಾಸಿ ಹಾಗೂಪಡನ್ನಕ್ಕಾಡಿನಲ್ಲಿ ವಾಸಿಸುತ್ತಿರುವ ವಿ.ಕೆ ಸೈನುದ್ದೀನ್ ಸೇರಿದಂತೆ 12ಮಂದಿಯನ್ನು ಇದುವರೆಗೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಇನ್ನೊಬ್ಬ ಆರೋಪಿ, ಮುಸ್ಲಿಂಲೀಗ್‍ನ ಪ್ರಾದೇಶಿಕ ನೇತಾರ, ತ್ರಿಕ್ಕರಿಪುರ ವಡಕ್ಕುಂಬಾಟ್ ನಿವಾಸಿ ಸಿರಾಜುದ್ದೀನ್ ಸೇರಿದಂತೆ ನಾಲ್ಕು ಮಂದಿ ತಲೆಮರೆಸಿಕೊಮಡಿದ್ದಾರೆ.
ಪ್ರಾಯಪೂರ್ತಿಯಾಗದ ಬಾಲಕರನ್ನು ಬಳಸಿ ಡೇಟಿಂಗ್ ಆ್ಯಪ್ ನಡೆಸುವವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಣಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ ವಿಜಯಭರತ್ ರೆಡ್ಡಿ ತಿಳಿಸಿದ್ದಾರೆ.

