ಉಪ್ಪಳ: ಚಿಪ್ಪಾರು ಜನಶಕ್ತಿ ಫ್ರೆಂಡ್ಸ್ ಕ್ಲಬ್ ಗ್ರಂಥಾಲಯದಲ್ಲಿ ಶನಿವಾರ ಓಣಂ ಹಬ್ಬವನ್ನು ಆಚರಿಸಲಾಯಿತು. ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ಕಮಲಾಕ್ಷ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಂಥಾಲಯ ಅಧ್ಯಕ್ಷ ಖಲೀಲ್ ನಾರ್ನಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಚಿಪ್ಪಾರು, ಪುರಂದರ ಶೆಟ್ಟಿಗಾರ್ ಚಿಪ್ಪಾರು ಮಾತನಾಡಿದರು. ದಾಸಪ್ಪ ಶೆಟ್ಟಿ ಚಿಪ್ಪಾರು ಸ್ವಾಗತಿಸಿ, ಗ್ರಂಥಪಾಲಕಿ ಜಯಲಕ್ಷ್ಮಿ ವಂದಿಸಿದರು.

.jpg)
.jpg)
