ಕುಂಬಳೆ: ಕುಂಬಳೆ ಗ್ರಾ.ಪಂ.ಕುಟುಂಬಶ್ರೀ ಸಿಡಿಎಸ್ ಆಯೋಜಿಸಿದ್ದ ಓಣಂ ಆಚರಣೆಯು ವಿಶೇಷವಾಗಿತ್ತು, ಇದು ನಿರ್ಗತಿಕರಿಗೆ ಮತ್ತು ಅಸಹಾಯಕರಿಗೆ ಸಹೋದರತ್ವ ಮತ್ತು ಸಮಾನತೆಯ ಸಂದೇಶವನ್ನು ನೀಡಿತು. ವೇದಿಕೆಯಲ್ಲಿ ಎಲ್ಲರೂ ಜೊತೆಯಾಗಿ ನೆರೆದು ನಗುನಗುತ್ತಾ ಭಾಗವಹಿಸಿದರು. ಕುಟುಂಬಶ್ರೀ ಸಿಡಿಎಸ್ ಈ ವರ್ಷದ ಓಣಂನ್ನು ವಿಶೇಷವಾಗಿಸಿತು. ಕುಂಬಳೆ ಪಂಚಾಯತಿ ಮಿತಿಯಲ್ಲಿರುವ ಉನ್ನತಿ(ಕಾಲನಿ)ಯ ಮಕ್ಕಳಿಗೆ ಓಣಂ ಉಡುಗೊರೆ ಮತ್ತು ಆಶ್ರಯದ ಕುಟುಂಬಗಳಿಗೆ ಓಣಂ ಕಿಟ್ ಗಳನ್ನು ವಿತರಿಸಿತು. ಪಂಚಾಯತಿ ವಿವಿಧ ಉನ್ನತಿಯ ಅತ್ಯಂತ ದುರ್ಬಲ ವರ್ಗಗಳ ಮಕ್ಕಳಿಗೆ ಮೊದಲು ಓಣಂ ಉಡುಗೊರೆ ನೀಡಲಾಯಿತು. ಮಕ್ಕಳಿಗೆ ಹೊಸ ಬಟ್ಟೆಗಳನ್ನು ವಿತರಿಸಲಾಯಿತು. ಆಶ್ರಯದ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ಹೊಂದಿರುವ ಓಣಂ ಕಿಟ್ ಗಳನ್ನು ನೀಡಲಾಯಿತು.
ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸುಫ್ ಅವರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಆಶ್ರಯ ಕುಟುಂಬದ ಅಂಗವಿಕಲ ಸದಸ್ಯೆ ವಸಂತಿಗೆ ಓಣಂ ಕಿಟ್ ನ್ನು ನೀಡುವ ಮೂಲಕ ವಿತರಣೆಯನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಸರ್ ಮೊಗ್ರಾಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಕೆ.ರತೀಶ್ ಕುಮಾರ್ ಭಾಗವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್, ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎ.ರಹಮಾನ್ ಆರಿಕ್ಕಾಡಿ, ಸಬೂರ ಸಿದ್ದೀಕ್, ಕುಟುಂಬಶ್ರೀ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಲೈಜು ಮಾತನಾಡಿದರು. ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಖದೀಜಾ ಸ್ವಾಗತಿಸಿ, ಪಂಚಾಯತಿ ಕುಟುಂಬಶ್ರೀ ಸದಸ್ಯ ಕಾರ್ಯದರ್ಶಿ ಶೈಜು ಕಡನ್ನಪ್ಪಳ್ಳಿ ವಂದಿಸಿದರು. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಹಾಗೂ ಕುಟುಂಬಶ್ರೀ ಸಿಡಿಎಸ್ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

.jpeg)
