ಮಂಜೇಶ್ವರ: ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಜಗದೀಶ್ ಶೆಟ್ಟಿ ಎಲಿಯಾಣ ಇವರನ್ನು ಬ್ರಹ್ಮಶ್ರೀ ಮೊಗೇರ ಸೇವಾಸಮಿತಿ, ಅಭಿವೃದ್ಧಿ ಸಮಿತಿ ಹಾಗೂ ಮಹಿಳಾ ಸಮಿತಿ ಚಿಗುರುಪಾದೆ ವತಿಯಿಂದ ಗಣ್ಯರ ಸಮ್ಮುಖದಲ್ಲಿ ಚಿಗುರುಪಾದೆಯಲ್ಲಿ ಗೌರವಿಸಲಾಯಿತು. ಕಾರ್ಯಕ್ರಮವು ಕ್ಷೇತ್ರ ಪರಿಸದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ನಾರಾಯಣ ಚಿನಾಲ, ರಮೇಶ್ ಶೆಟ್ಟಿ ಕುಳಬೈಲ್, ವಸಂತ ಭಟ್ ತೊಟ್ಟೆತೋಡಿ, ಪಂಚಾಯತಿ ಸದಸ್ಯೆ ಸರಸ್ವತಿ ಎಲಿಯಾಣ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ ಉಪಸ್ಥಿತರಿದ್ದರು. ಟಿ.ಡಿ. ಸದಾಶಿವ ರಾವ್ ಸ್ವಾಗತಿಸಿ, ನಿವೃತ ಮುಖ್ಯ ಶಿಕ್ಷಕ ಶಿವಶಂಕರ್. ಬಿ. ವಂದಿಸಿದರು, ನಿವೃತ ಮುಖ್ಯ ಶಿಕ್ಷಕ ರಾಜಾರಾಮ್ ರಾವ್, ಯೋಗೀಶ್ ರಾವ್ ಚಿಗುರುಪಾದೆ ಮುಂತಾದವರು ಜಗದೀಶ್ ಶೆಟ್ಟಿಯವರ ವೃತ್ತಿ ಜೀವನದ ಪರಿಚಯ ಮಾಡಿದರು.

.jpg)
