ಉಪ್ಪಳ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಹೈಸ್ಕೂಲ್ ವಿಭಾಗದ ಯಕ್ಷಗಾನ ಸ್ಪರ್ಧೆಯಲ್ಲಿ ಕೊಡ್ಲಮೊಗರು ವಾಣಿವಿಜಯ ಹೈಸ್ಕೂಲ್ ನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಅಶ್ವಥ್ ಮಂಜನಾಡಿ ತರಬೇತಿ ನೀಡಿ ನಿರ್ದೇಶಿಸಿದ್ದರು. ಹಿಮ್ಮೇಳದಲ್ಲಿ ಸಿಂಚನ ಮುಡುಗೋಡಿ(ಭಾಗವತರು), ಲವ ಕುಮಾರ ಐಲ, ಜಿತೇಶ್ ಕೋಳ್ಯೂರು(ಚೆಂಡೆ-ಮದ್ದಳೆ), ಗುರುರಾಜ ಭಟ್ ಕೈರಂಗಳ ಸಹಕರಿಸಿದರು.

.jpg)
.jpg)
