ಬದಿಯಡ್ಕ: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ 100ನೇ ವರ್ಷಾಚರಣೆಯ ಅಂಗವಾಗಿ ಎಸ್.ಕೆ.ಎಸ್.ಎಸ್.ಎಫ್. ಬದಿಯಡ್ಕ ಪ್ರಾದೇಶಿಕ ಸಮಿತಿ ವತಿಯಿಂದ ಸಮಸ್ತ ಅಧ್ಯಕ್ಷ ಸೈಯದುಲ್ ಉಲಾಮಾ ಸೈಯದ್ ಜಿಫ್ರಿ ತಂಙಳ್ ಅವರ ನೇತೃತ್ವದ ಸಮಸ್ತ ಶತಮಾನೋತ್ಸವ ಸಂದೇಶ ಯಾತ್ರೆಯ ಉದ್ಘಾಟನೆ ಬದಿಯಡ್ಕ ಪೇಟೆಯಲ್ಲಿ ನಡೆಯಿತು.
ಸಮಸ್ತ ಮತ್ತು ಅದರ ಸಹ ಘಟಕಗಳ ಅನೇಕ ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಂಡರು. ಪ್ರಾದೇಶಿಕ ಉಪಾಧ್ಯಕ್ಷ ಅಬ್ದುಲ್ ಖಾದರ್ ಯಮಾನಿ ಅಧ್ಯಕ್ಷತೆಯಲ್ಲಿ ಬದಿಯಡ್ಕ ರೇಂಜ್ ಅಧ್ಯಕ್ಷ ಮೂಸಾ ಮುಸ್ಲಿಯಾರ್ ಉದ್ಘಾಟಿಸಿದರು. ಕಣ್ಣಿಯತ್ ಉಸ್ತಾದ್ ಅಕಾಡೆಮಿಯ ಸಹ ಪ್ರಾಂಶುಪಾಲ ಶಮೀರ್ ಹೈದವಿ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಸಿದ್ದೀಕ್ ಬೆಳಿಂಜ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅನ್ವರ್ ತುಪ್ಪೆಕಲ್ಲು, ಅಬ್ದುಲ್ ರಝಾಕ್ ದಾರಿಮಿ ಮಿಲಾದ್ ನಗರ, ರಝಾಕ್ ಅರ್ಶದಿ ಕುಂಬ್ಡಾಜೆ, ಶಾಫಿ ಪಳ್ಳತ್ತಡ್ಕ, ಖಲೀಲ್ ಆಲಂಕೋಡು, ರಶೀದ್ ಪಳ್ಳತ್ತಡ್ಕ, ಶರೀಫ್ ಮಾತನಾಡಿದರು. ಮುಖಂಡರಾದ ಹನೀಫಿ, ಫಾರೂಕ್ ಫೈಝಿ, ಸಿದ್ದೀಕ್ ಎದುರ್ತೋಡು, ರಹ್ಮಾನ್ ಮಾರ್ಪನಡ್ಕ, ಅಸೀಫ್ ವಿದ್ಯಾಗಿರಿ ಮುಂತಾದವರು ಉಪಸ್ಥಿತರಿದ್ದರು.

.jpg)
