ಬೀಜಿಂಗ್: ಕೇವಲ 2 ಸೆಕೆಂಡುಗಳಲ್ಲಿ ಗಂಟೆಗೆ 700 ಕಿ.ಮೀ ವೇಗವನ್ನು ಸಾಧಿಸುವ ಮೂಲಕ ಚೀನಾದ ಮ್ಯಾಗ್ಲೆವ್ ರೈಲು ವಿಶ್ವದಾಖಲೆ ಬರೆದಿದೆ.
ಚೀನಾದ ನ್ಯಾಷನಲ್ ಯೂನಿವರ್ಸಿಟಿ ಆಫ್ ಡಿಫೆನ್ಸ್ ಟೆಕ್ನಾಲಜಿಯ ಸಂಶೋಧಕರು ಸುಮಾರು 1000 ಕಿ.ಗ್ರಾಂ ತೂಕದ ಮ್ಯಾಗ್ಲೆವ್ ರೈಲಿನ (ವಿದ್ಯುತ್ಕಾಂತೀಯ ರೈಲು) ಮೇಲೆ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ.
1,310 ಅಡಿ ಉದ್ದದ ಮ್ಯಾಗ್ಲೆವ್ ಹಳಿಯ ಮೇಲೆ ಪರೀಕ್ಷೆ ನಡೆಸಲಾಗಿದ್ದು ಕಣ್ಣ ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ರೈಲು 700 ಕಿ.ಮೀ ವೇಗ ಸಾಧಿಸಿದ ಬಳಿಕ ಹಳಿಯ ಕೊನೆಯಲ್ಲಿ ಬಂದು ನಿಂತಿದೆ.
ರೈಲಿನ ವೇಗವರ್ಧನೆಯು ಎಷ್ಟು ಶಕ್ತಿಯುತವಾಗಿದೆಯೆಂದರೆ ಅದು ರಾಕೆಟ್ ಅನ್ನು ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ವೇಗದಲ್ಲಿ ಅತೀ ದೂರದ ನಗರಗಳನ್ನೂ ನಿಮಿಷಗಳಲ್ಲಿ ತಲುಪಬಹುದಾಗಿದೆ. ಈ ವರ್ಷದ ಜನವರಿಯಲ್ಲಿ ಇದೇ ಸಂಶೋಧಕರ ತಂಡವು ಇದೇ ಹಳಿಯ ಮೇಲೆ ನಡೆಸಿದ ಪರೀಕ್ಷೆಯಲ್ಲಿ ರೈಲು 2 ಸೆಕೆಂಡುಗಳಲ್ಲಿ 648 ಕಿ.ಮೀ ವೇಗ ಸಾಧಿಸಿರುವುದು ಇದುವರೆಗಿನ ವಿಶ್ವದಾಖಲೆ ಆಗಿತ್ತು.

