ಬದಿಯಡ್ಕ: ನೀರ್ಚಾಲು ಕುಮಾರಸ್ವಾಮಿ ಭಜನಾ ಮಂದಿರ ಸಭಾಭವನದಲ್ಲಿ ದಿ.ಪರಮೇಶ್ವರ ಆಚಾರ್ಯ ಸ್ಮಾರಕ ಕಲಾ ಸೇವಾ ಪ್ರತಿಷ್ಠಾನದ 23ನೇ ವರ್ಷದ ಸಂಸ್ಮರಣಾ ಸಮಾರಂಭದಲ್ಲಿ ನೀರ್ಚಾಲಿನ ಪರಮೇಶ್ವರ ಆಚಾರ್ಯ ಕಲಾಸೇವಾ ಪ್ರತಿಷ್ಠಾನದ ಸಂಸ್ಮರಣಾ ಸಮಾರಂಭದಲ್ಲಿ ಹವ್ಯಾಸಿ ಯಕ್ಷಗಾನ, ತಾಳಮದ್ದಳೆ ಕಲಾವಿದ ಉದಯಶಂಕರ ಭಟ್ ಮಜಲು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಹಿಂಪ ಧರ್ಮಪ್ರಸಾರ ಪ್ರಮುಖ್ ವಾಮನ ಆಚಾರ್ಯ ಬೋವಿಕ್ಕಾನ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬಳಿಕ ವಿಘ್ನೇಶ್ವರ ಯಕ್ಷಗಾನ ಕಲಾಸಂಘ ನಾಯ್ಕಾಪು ತಂಡದವರಿಂದ ಕಾರ್ತವೀರ್ಯಾರ್ಜುನ ಆಖ್ಯಾಯಿಕೆಯ ಯಕ್ಷಗಾನ ತಾಳಮದ್ದಳೆ ನಡೆಯಿತು.
ಯಕ್ಷಗಾನದ ಯಾವುದೇ ಪ್ರಸಂಗದ ಯಾವುದೇ ಪಾತ್ರದ ಪದ್ಯವನ್ನು ತಕ್ಷಣ ನೆನಪು ಮಾಡಿ ಭಾಗವತರಿಗೆ ಎತ್ತಿಕೊಡಬಲ್ಲ ಉದಯಶಂಕರ ಭಟ್ಟ ಮಜಲು ಅವರು ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದ ಸ್ಥಾಪಕ ಸದಸ್ಯರಾಗಿ, ಸುವರ್ಣ ಮಹೋತ್ಸವ ಆಚರಿಸಿ ಮುಂದುವರಿಯುತ್ತಿರುವ ನಾರಾಯಣಮಂಗಲದ ವಿಘ್ನೇಶ್ವರ ಯಕ್ಷಗಾನ ಸಂಘದ ಸಕ್ರಿಯ ಸದಸ್ಯರಾಗಿ ನಾಡಿನ ಹಲವಾರು ಯಕ್ಷಗಾನ ಸಂಘಗಗಳ ಅತಿಥಿ ಕಲಾವಿದರಾಗಿ ಮಾತ್ರವಲ್ಲ ವಿವಿಧೆಡೆಗಳಲ್ಲಿ ತಾಳಮದ್ದಳೆ ಮತ್ತು ಬಯಲಾಟದ ಸಂಘಟಕರಾಗಿ ನಿರಂತರ ಕಾರ್ಯಪ್ರವೃತ್ತರಾಗಿದ್ದಾರೆ.

.jpeg)
