ಪೆರ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮಂಜೇಶ್ವರ ಇದರ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪರಮ ಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ವಿನ್‍ಟಚ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಕಾಸರಗೋಡು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಪೆರ್ಲ ವಲಯ, ಶೌರ್ಯ ವಿಪತ್ತು ಘಟಕ ಮತ್ತು ನವಜೀವನ ಸಮಿತಿ ಪೆರ್ಲ ಇವುಗಳ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಡಿ.28 ರಂದು ಭಾನುವಾರ ನಡೆಯಲಿದೆ. ಪೆರ್ಲ ವ್ಯಾಪಾರಿ ಸಭಾ ಭವನ ಸಭಾಂಗಣದಲ್ಲಿ ಅಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1ಎ ವರೆಗೆ ಶಿಬಿರ ನಡೆಯಲಿದೆ.
ಕಣ್ಣು, ಕಿವಿ, ಮೂಗು, ಗಂಟಲು ವಿಭಾಗ, ಸ್ತ್ರೀರೋಗ, ಚರ್ಮರೋಗ ಮತ್ತು ನರರೋಗ, ಸಾಮಾನ್ಯ ರೋಗ ತಪಾಸಣೆ, ಎಲುಬು ಮತ್ತು ಕೀಲುರೋಗ ವಿಭಾಗಕ್ಕೆ ಸಂಬಂಧಪಟ್ಟ ವೈದ್ಯರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

