HEALTH TIPS

ವಾಯುಮಾಲಿನ್ಯ: ದೆಹಲಿಯ ಖಾಸಗಿ, ಸರ್ಕಾರಿ ಸಂಸ್ಥೆಗಳಲ್ಲಿ ಶೇ 50ರಷ್ಟು WFH ಕಡ್ಡಾಯ

 ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರಗೊಂಡಿದ್ದು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಶೇ50ರಷ್ಟು ಸಿಬ್ಬಂದಿಗೆ ವರ್ಕ್‌ ಫ್ರಂ ಹೋಮ್ ಕಡ್ಡಾಯಗೊಳಿಸಿ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ. ನಿರ್ದೇಶನಗಳನ್ನು ಉಲ್ಲೇಘಿಸಿದರೆ ದಂಡ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

ಈ ವರ್ಷದ ಚಳಿಗಾಲದಲ್ಲಿ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಅಪಾಯಕಾರಿ ಮಟ್ಟಕ್ಕೆ ಏರಿದ್ದು, ಡಿಸೆಂಬರ್ 15ರಂದು ವಾಯು ಗುಣಮಟ್ಟ ಸೂಚ್ಯಂಕವು(ಎಕ್ಯೂಐ) 498ಕ್ಕೆ ತಲುಪಿತ್ತು

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ(ಸಿಪಿಸಿಬಿ) ದತ್ತಾಂಶದ ಪ್ರಕಾರ, ಗಾಳಿಯ ಗುಣಮಟ್ಟ ಮೊದಲು ಕಳಪೆ ಮಟ್ಟದಲ್ಲಿತ್ತು. ಇದೀಗ, 'ತೀವ್ರ ಕಳಪೆ' ಮಟ್ಟಕ್ಕೆ ಏರಿದ್ದು, ಎಕ್ಯೂಐ ಕ್ಷೀಣಿಸುತ್ತಿದೆ. ಈ ಬಿಕ್ಕಟ್ಟಿನ ಪರಿಣಾಮವಾಗಿ ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಪರಿಸ್ಥಿತಿಯನ್ನು ನಿಭಾಯಿಸುವ ಭರವಸೆಯಲ್ಲಿ ರಾಜಧಾನಿಯಾದ್ಯಂತ ಗ್ರಾಪ್ 4(ಕಟ್ಟುನಿಟ್ಟಾದ ಮಾಲಿನ್ಯ ನಿಯಂತ್ರಣ ಕ್ರಮಗಳು)ಅನ್ನು ತ್ವರಿತವಾಗಿ ಅನ್ವಯಿಸಿತು ಎಂದು ಸರ್ಕಾರ ಹೇಳಿದೆ.

ಕಳೆದ ಶನಿವಾರ ಮತ್ತು ಸೋಮವಾರದ ನಡುವೆ ರಾಜಧಾನಿಯಲ್ಲಿ ಹೊಗೆಯ ಮುಸುಕು ಆವರಿಸಿ, ಅನೇಕ ರಸ್ತೆ ಅಪಘಾತಗಳು, ವಾಹನ ದಟ್ಟಣೆ ಮತ್ತು ವಿಮಾನ ರದ್ದತಿ ಹಾಗೂ ವಿಳಂಬಕ್ಕೆ ಕಾರಣವಾಗಿದೆ.

ಗೋಚರತೆ ಗಮನಾರ್ಹವಾಗಿ ಕಡಿಮೆಯಾಗಿದ್ದು, ದೆಹಲಿ ವಿಮಾನ ನಿಲ್ದಾಣದ ಆಢಳಿತ ಮಂಡಳಿಯು ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಸಲಹೆಗಳನ್ನು ನೀಡಿತ್ತು.

ಮೂರು ದಿನಗಳ ನಂತರ, ಬಲವಾದ ಗಾಳಿ ಮತ್ತು ಮಂಜು ಕರಗುತ್ತಿರುವ ಹಿನ್ನೆಲೆಯಲ್ಲಿ ಗಾಳಿಯ ಗುಣಮಟ್ಟ ಸ್ವಲ್ಪ ಸುಧಾರಿಸಿದೆ. ಮಂಗಳವಾರದ ಎಕ್ಯೂಐ 354 ರಿಂದ 329ಕ್ಕೆ ಇಳಿದಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries