ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನಗರಸಭೆ ಹಾಗೂ ಮಹಾನಗರಪಾಲಿಕೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳ ಆಯ್ಕೆ ಶುಕ್ರವಾರ ನೆರವೇರಿತು. ಕಸರಗೋಡು ನಗರಸಭಾ ಅಧ್ಯಕ್ಷೆಯಾಗಿ ನಗರಸಭೆಯ 16ನೇ ವಾರ್ಡು ತುರುತ್ತಿಯಿಮದ ವಿಜೇತರಾದ ಶಾಹಿನಾಸಲೀಂ ಅವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ತಳಂಗರೆ ಪಳ್ಳಿಕ್ಕಲ್ ವಾರ್ಡಿನಿಂದ ವಿಜೇತರಾದ ಕೆ.ಎಂ ಹನೀಫಾ ಆಯ್ಕೆಯಾದರು. ಶಾಹಿನಾ ಸಲೀಂ ಈ ಹಿಂದೆ ಚೆರ್ಕಳ ಗ್ರಾಮ ಪಮಚಾಯಿತಿ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದು, ಪ್ರಸಕ್ತ ವನಿತಾ ಲೀಗ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಚೆಮ್ನಾಡ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ, ಮುಸ್ಲಿಂಲೀಗ್ ಮುಖಂಡ ಕಲ್ಲಟ್ರ ಅಬ್ದುಲ್ ಖಾದರ್ ಅವರ ಪುತ್ರಿಯಾಗಿದ್ದಾರೆ. ಒಟ್ಟು 39ವರ್ಡುಗಳಿರುವ ನಗರಸಭೆಯಲ್ಲಿ ಮುಸ್ಲಿಂಲೀಗ್ 24, ಬಿಜೆಪಿ 12 ಹಾಗೂ ಪಕ್ಷೇತರರು ಮುರು ಮಂದಿಯಿದ್ದಾರೆ.
ತಿರುವನಂತಪುರ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಮೇಯರ್ ಸ್ಥಾನ ಅಲಂಕರಿಸುವುದರೊಂದಿಗೆ ಕೇರಳ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದೆ. ಹಿರಿಯ ಹಾಗೂ ಯುವ ನೇತಾರ ವಿ. ವಿ. ರಾಜೇಶ್ ಅವರಿಗೆ ಮೇಯರ್ ಹಾಗೂ ಆಶಾನಾಥ್ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ತಿರುವನಂತಪುರ ಮಹಾನಗರಪಾಲಿಕೆಯ 45ವರ್ಷಗಳ ಎಡರಂಗ ಆಡಳಿತಕ್ಕೆ ತೆರೆಬಿದ್ದಿದೆ. ಕಳೆದ ಐದು ವರ್ಷಗಳಿಂದ ವಿ. ವಿ. ರಾಜೇಶ್ ಅವರು ಮಹಾನಗರಪಾಲಿಕೆಯ ಪ್ರತಿಪಕ್ಷ ನಾಯಕರಾಗಿದ್ದರು. ಮಹಾನಗರಪಾಲಿಕೆಯ ಭ್ರಷ್ಟಾಚಾರ ಆರೋಪಿಸಿ ಸಾಮಾಜಿಕ ಹೋರಾಟವನ್ನೂ ನಡೆಸಿದ್ದರು.


