ಮುಳ್ಳೇರಿಯ: ಬೆಳ್ಳೂರು ಶಾಲಾ ವಿದ್ಯಾರ್ಥಿಯೊಬ್ಬನ ಮೃತದೇಹ ಮನೆ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಳ್ಳೂರು ನೆಟ್ಟಣಿಗೆ ಕುಂಜತ್ತೊಡಿ ನಿವಾಸಿ, ಜಯಕರ-ಅನಿತಾ ದಂಪತಿ ಪುತ್ರ, ಬೆಳ್ಳೂರು ಶಾಲಾ ಒಂಬತ್ತನೇ ತರಗತಿ ವಿದ್ಯಾರ್ಥಿ ಪ್ರಜ್ವಲ್(14)ಮೃತಪಟ್ಟ ವಿದ್ಯಾರ್ಥಿ.
ಮುಳ್ಳೇರಿಯಾದ ಶಾಲೆಯಲ್ಲಿ ಕಲಿಯುತ್ತಿರುವ ಪ್ರಜ್ವಲ್ ಸಹೋದರಿಯನ್ನು ಕರೆತರಲು ತೆರಳಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಂಗಳವಾರ ಸಂಜೆ ವಿದ್ಯಾರ್ಥಿ ಕೃತ್ಯವೆಸಗಿದ್ದಾನೆ. ಕೊಠಡಿಯೊಳಗೆ ಶಾಲು ಬಳಸಿ ನೇಣಿನಲ್ಲಿ ನೇತಾಡುತ್ತಿದ್ದ ಪ್ರಜ್ವಲ್‍ನನ್ನು ಸ್ಥಳೀಯರು ಸೇರಿ ತಕ್ಷಣ ಕೆಳಗಿಳಿಸಿ ಮುಳ್ಳೇರಿಯಾದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.
ಬಾಲಕ ಭಾನುವಾರ ತನ್ನ ಅಜ್ಜಿಮನೆಗೆ ತೆರಳಿದ್ದು, ಸೋಮವಾರ ನೇರ ಶಾಲೆಗೆ ಆಗಮಿಸಿದ್ದಾನೆ. ಅರ್ಧವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು, ತನ್ನ ಪರೀಕ್ಷೆ ಮಧ್ಯಾಹ್ನ ಮೇಲೆ ಇರುವುದಾಗಿ ಭಾವಿಸಿ ತಡವಾಗಿ ಶಾಲೆಗೆ ತಲುಪದ್ದನು. ಆದರೆ ಶಿಕ್ಷಕರು ಈತನಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದರು. ಪ್ರಜ್ವಲ್ ಓದಿನಲ್ಲಿ ಮುಂದಿದ್ದು, ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


