ಕುಂಬಳೆ : ಮಾರಕ ಹ್ಯಾಶಿಷ್ ಓಯಿಲ್ ಸಾಗಿಸುತ್ತಿದ್ದ ಇಬ್ಬರನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರಿಕ್ಕಾಡಿ ಲಕ್ಷಂವೀಡ್ ಕಾಲನಿ ನಿವಾಸಿ ಮಹಮ್ಮದ್ ಫಸಲ್ ಯಾನೆ ಕಂಡನ್ ಫಸೀಲು (40)ಹಾಗೂ ಈತನ ಸಂಬಂಧಿ ಅಬ್ದುಲ್ ನಿಸಾರ್ (23) ಬಂಧಿತರು.
ಸೋಮವಾರ ರಾತ್ರಿ 7.30ರ ವೇಳೆಗೆ ಪುತ್ತಿಗೆ ಮುಗು ಎಂಬಲ್ಲಿ ಕುಂಬಳೆ ಠಾಣೆ ಎಸ್. ಐ ಅನಂತಕೃಷ್ಣನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರನ್ನೂ ಬಂಧಿಸಿ, ಇವರ ವಶದಲ್ಲಿದ್ದ 7.4 ಗ್ರಾಂ ಹಾಶಿಷ್ ಓಯಿಲ್ ವಶಪಡಿಸಿಕೊಳ್ಳಲಾಗಿದೆ. ಪೆÇಲೀಸರನ್ನು ಕಂಡಾಗ ರಸ್ತೆ ಬದಿಯಲ್ಲಿದ್ದ ಆರೋಪಿಗಳು ಓಡಿ ಪರಾರಿಯಾಗಲು ಯತ್ನಿಸಿದ್ದು, ಇವರನ್ನು ಹಿಂಬಾಲಿಸಿ ಸೆರೆಹಿಡಿದು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ. ಬಂಧಿತ ಆರೋಪಿ ಫಸಲು ಈ ಹಿಂದೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.

