ಕಾಸರಗೋಡು: ಕಾಂಞಂಗಾಡ್ ಕೆಎಸ್‍ಆರ್‍ಟಿಸಿಯ 'ಬಜೆಟ್ ಪ್ರವಾಸೋದ್ಯಮ ಸೆಲ್'ವತಿಯಿಂದ ಕ್ರಿಸ್‍ಮಸ್-ಹೊಸ ವರ್ಷದ ರಜಾದಿನಗಳಲ್ಲಿ ಪ್ರವಾಸ ಕಾರ್ಯ ಆಯೋಜಿಸುತ್ತಿದೆ. ಡಿಸೆಂಬರ್ 23, 27 ಮತ್ತು 31 ರಂದು ವಯನಾಡಿಗೆ (ಬಾನಾಸುರ್ ಸಾಗರ, ಎನ್ನೂರ್, ಹನಿ ಮ್ಯೂಸಿಯಂ, ಜಂಗಲ್ ಸಫಾರಿ) ಒಂದು ದಿನದ ಪ್ರವಾಸ ಆಯೋಜಿಸಲಾಗುವುದು.
ಡಿಸೆಂಬರ್ 26 ಮತ್ತು ಜನವರಿ 2 ರಂದು ಪಾಲಕ್ಕಯಂ ತಟ್ಟ್, ಪೈತಲ್ ಮಲೆ, ಏಯರಕುಂಡು ಪ್ರವಾಸ, ಡಿಸೆಂಬರ್ 27 ಮತ್ತು ಡಿಸೆಂಬರ್ 30 ರಂದು ಕೋಯಿಕ್ಕೋಡ್, ಕರಿಯಾತುಂಪಾರ ಪ್ರವಾಸ, ಜನವರಿ 1ರಂದು ಕಣ್ಣೂರು, ಕಡಲುಂಡಿ, ಚಳಿಯಂ ಯಾತ್ರೆಯನ್ನೂ ಆಯೋಜಿಸಲಾಗಿದೆ.
ಡಿ.28ರಂದು ಆರಂಭಗೊಂಡು 31ರಂದು ಮುಕ್ತಾಯಗೊಳ್ಳುವ ಯಾತ್ರೆಯು ಗವಿ, ಅಡವಿ, ಕಂಬಂ, ರಾಮಕ್ಕಲ್ ಮೇಡು, ಪರುಂತುಂಪಾರ ಮೊದಲಾದ ಸ್ಥಳಗಳಿಗೆ ಭೇಟಿ ನೀಡಲಿದೆ. ಡಿಸೆಂಬರ್ 26 ರಂದು ವಾಗಮಣ್, ಇಲ್ಲಿಕಲ್ಕಲ್ಲು ಮತ್ತು ಇಲವೀಯಪೂಂಚಿರಾಗೆ ಭೇಟಿ ನೀಡಿ 29 ರಂದು ಬೆಳಗ್ಗೆ ವಾಪಸಾಗುವುದು. 29 ರಿಂದ 31 ರವರೆಗೆ ನೀಲಂಬೂರ್ ಮತ್ತು ಕಕ್ಕಡಂ ಪೆÇಯಿಲ್ ಯಾತ್ರೆಯನ್ನೂ ಆಯೋಜಿಸಲಾಗುತ್ತಿದೆ. ಪ್ರವಾಸಾರ್ಥಿಗಳು ದೂರವಾಣಿ ಸಂಖ್ಯೆ(9446088378, 8606237632)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

