ಕಾಸರಗೋಡು: ನಗರದ ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಆಶ್ರಯದಲ್ಲಿ 60ನೇ ವರ್ಷದ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ಡಿ. 11ರಿಂದ 14ರ ವರೆಗೆ ನಡೆಯಲಿದೆ. 11ರಂದುಬೆಳಗ್ಗೆ ರಜತ ಛಾಯಾಚಿತ್ರ ಫಲಕ ಪ್ರತಿಷ್ಠಾ ಪ್ರಥಮ ದಿನವನ್ನು ಆಚರಿಸಲಾಗುವುದು. ಬೆಳಗ್ಗೆ ಗಣಪತಿ ಹವನ, ಮಧ್ಯಾಹ್ನ ವಿಶೇಷ ಮಹಾಪೂಜೆ, ಸಂಜೆ ಭಜನಾ ಸಂಕೀರ್ತನೆ, 12ರಂದುವಿಶೇಷ ಭಜನೆ, ಲಕ್ಷಾರ್ಚನೆ, 13ರಂದು ಬೆಳಗ್ಗೆ 5ಕ್ಕೆ ಗಣಪತಿ ಹೋಮ, ಸಹಸ್ರನಾಮಾರ್ಚನೆ, ಭಜನಾ ಸಂಕೀರ್ತನೆ, ಸಂಜೆ 6ರಿಂದ ಪಾಲೆಕೊಂಬು ಮೆರವಣಿಗೆ ನಡೆಯುವುದು. ಕಾಸರಗೋಡು ಅಶೋಕನಗರ ಶ್ರೀ ಅಯ್ಯಪ್ಪ ಭಜನಾಮಂದಿರದಿಂದ ಆರಂಭಗೊಳ್ಳುವ ಮೆರವಣಿಗೆ ಹೊಸ ಬಸ್ ನಿಲ್ದಾಣ ವೃತ್ತ, ಅಶ್ವಿನಿನಗರ, ಶಿವಾಜಿನಗರ, ಕರಂದಕ್ಕಾಡು ಜಂಕ್ಷನ್, ಬ್ಯಾಂಕ್ ರಸ್ತೆ, ಮಠದ ಪೇಟೆ, , ನಾಗರಾಜಕಟ್ಟೆ ಹಾದಿಯಾಗಿ ಶ್ರೀಮಲ್ಲಿಕಾರ್ಜುನ ದೇವಸ್ಥಾನ ಮುಂಭಾಗದ ಸಭಾಂಗಣಕ್ಕೆ ತಲುಪಲಿರುವುದು. ರಾತ್ರಿ 11ರಿಂದ ಶ್ರೀ ಅಯ್ಯಪ್ಪನ್ ಗೀತೆ, ಬೇಟೆವಿಳಿ, ಪಾಲ್ಕಿಂಡಿ ಮೆರವಣಿಗೆ, ಕೆಂಡಸೇವೆ ನಡೆಯುವುದು. 14ರಂದು ಬೆಳಗ್ಗೆ 5ಕ್ಕೆ ಶ್ರೀ ಅಯ್ಯಪ್ಪ-ವಾವರನ್ ಯುದ್ಧ ನಡೆಯುವುದು. ಪ್ರತಿ ದಿನ ವಿವಿಧ ಸಾಂಸ್ಕøಥಿಕ ಕಾರ್ಯಕ್ರಮ ನಡೆಯುವುದು.

