ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯತಿಯ ಐದನೇ ವಾರ್ಡ್‍ನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ. ಗೀತಾ ಗೆಲುವು ಸಾಧಿಸಿದ್ದಾರೆ. ಅವರು ಈ ಹಿಂದೆ ಬಿಜೆಪಿಯ ಉಪಾಧ್ಯಕ್ಷರಾಗಿದ್ದರು. ಗೆಲ್ಲುವ ಸಾಧ್ಯತೆ ಕಡಿಮೆ ಇರುವ ಮತ್ತೊಂದು ವಾರ್ಡ್ ಅನ್ನು ಪಕ್ಷಕ್ಕೆ ನೀಡಿರುವುದನ್ನು ವಿರೋಧಿಸಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರು ಬಂಡಾಯವಾಗಿ ಸ್ಪರ್ಧಿಸುವುದನ್ನು ಖಚಿತಪಡಿಸಿದ ಬಳಿಕ ಜಿಲ್ಲಾ ನಾಯಕತ್ವವು ಅವರನ್ನು ಪಕ್ಷದಿಂದ ಹೊರಹಾಕಿತು. ಅವರು ಬಿಜೆಪಿ ಅಭ್ಯರ್ಥಿಗಿಂತ 37 ಹೆಚ್ಚಿನ ಮತಗಳಿಂದ ಗೆದ್ದಿರುವರು. ಪ್ರಸ್ತುತ, ಬೆಳ್ಳೂರು ಪಂಚಾಯತ್‍ನಲ್ಲಿ ಬಿಜೆಪಿ 14 ಸ್ಥಾನಗಳಲ್ಲಿ ಆರು ಸ್ಥಾನಗಳನ್ನು ಗೆದ್ದಿದೆ. ಅಧಿಕಾರಕ್ಕೆ ಬರಲು, ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದವರ ಬೆಂಬಲವೂ ಅಗತ್ಯವಾಗಿದೆ.

