ಮುಳ್ಳೇರಿಯ: ಕಾರಡ್ಕ ಪಂಚಾಯತ್ ಆಡಳಿತವನ್ನು ಬಿಜೆಪಿ ಉಳಿಸಿಕೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಈಗಾಗಲೇ 1ರಿಂದ 8ರ ವರೆಗಿರುವ ವಾರ್ಡ್ಗಳಲ್ಲಿ ಜಯಗಳಿಸಿದ್ದು, 12ನೇ ವಾರ್ಡ್ಗಳಲ್ಲಿ ಜಯ ಸಾಧ್ಯತೆ ಲೆಕ್ಕಹಾಕಲಾಗಿತ್ತು. ಆದರೆ 1ಮತದ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ, ಪಂಚಾಯತ್ ಅಧ್ಯಕ್ಷ ಕೆ. ಗೋಪಾಲಕೃಷ್ಣ ಸೋಲನುಭವಿಸಿದರು. ಇಲ್ಲಿ ಐಕ್ಯರಂಗದ ಶರೀಫ್ ಎಂ. ಜಯ ಗಳಿಸಿದರು. 1ನೇ ವಾರ್ಡ್ನಲ್ಲಿ ಪ್ರಶಾಂತ್ ಕಲ್ಲಂಕೂಡ್ಲು, 2ನೇ ವಾರ್ಡ್ನಲ್ಲಿ ಬಾಲಕೃಷ್ಣ ಅಂಬೆಮೂಲೆ, 3ನೇ ವಾರ್ಡ್ನಲ್ಲಿ ಸವಿತ ಕುಮಾರಿ ಪಿ, 4ನೇ ವಾರ್ಡ್ನಲ್ಲಿ ವಸಂತಿ ಎ, 5ನೇ ವಾರ್ಡ್ನಲ್ಲಿ ಗಾಯತ್ರಿ, 6ನೇ ವಾರ್ಡ್ನಲ್ಲಿ ಜನನಿ ಎಂ, 7ನೇ ವಾರ್ಡ್ನಲ್ಲಿ ಬೇಬಿ ಎ, 8ನೇ ವಾರ್ಡ್ನಲ್ಲಿ ದಾಮೋದರ ಜಯಗಳಿಸಿದ್ದಾರೆ. 12ನೇ ವಾರ್ಡ್ನಲ್ಲಿ ಹಾಲಿ ಪಂಚಾಯತ್ ಅಧ್ಯಕ್ಷ ಎ. ಗೋಪಾಲಕೃಷ್ಣ ಜಯ ಗಳಿಸುವ ಸಾಧ್ಯತೆ ಕಂಡುಬರುತ್ತಿದೆ.
2ನೇ ವಾರ್ಡ್ನಲ್ಲಿ ಜಯಗಳಿಸಿದ ಬಾಲಕೃಷ್ಣ ಅಂಬೆಮೂಲೆಯವರಿಗೆ 438 ಮತಗಳು ಲಭಿಸಿದ್ದು, ಕಾಂಗ್ರೆಸ್ನ ಸ್ವತಂತ್ರ ಅಭ್ಯರ್ಥಿ ಗಂಗಾಧರನ್ರಿಗೆ 266, ಎಡರಂಗ ಬೆಂಬಲಿತ ಅಭ್ಯರ್ಥಿ ಭಾಸ್ಕರನ್ಗೆ 195 ಮತ ಲಭಿಸಿದೆ. ಒಂದನೇ ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿಗೆ 461, ಕಾಂಗ್ರೆಸ್ಗೆ 121, ಎಡಪಕ್ಷಕ್ಕೆ 32 ಮತ ಲಭಿಸಿದೆ. 3ನೇ ವಾರ್ಡ್ನಲ್ಲಿ ಬಿಜೆಪಿಗೆ 536, ಎಡಪಕ್ಷಕ್ಕೆ 74, ಕಾಂಗ್ರೆಸ್ಗೆ 36, 5ನೇ ವಾರ್ಡ್ನಲ್ಲಿ ಬಿಜೆಪಿಗೆ 589, ಕಾಂಗ್ರೆಸ್ಗೆ 184, ಸಿಪಿಎಂಗೆ 88 ಮತ ಲಭಿಸಿದೆ. 9,10 ವಾರ್ಡ್ಗಳಲ್ಲಿ ಐಕ್ಯರಂಗದ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

