ಕುಂಬಳೆ: ಕುಂಬಳೆ ಪಂಚಾ ಯತ್‌ನಲ್ಲಿ ಫಲಿತಾಂಶ ಘೋಷಿಸಿದ 9 ವಾರ್ಡ್‌ಗಳ ಪೈಕಿ ಆರರಲ್ಲಿ ಮುಸ್ಲಿಂ ಲೀಗ್ ಜಯಗಳಿಸಿದೆ. ತಲಾ ಒಂದೊಂದರಲ್ಲಿ ಬಿಜೆಪಿ, ಸಿಪಿಎಂ, ಕಾಂಗ್ರೆಸ್ ಗೆಲುವು ಸಾಧಿಸಿದೆ. ೫ನೇ ವಾರ್ಡ್ ಆದ ಉಜಾರಿನಲ್ಲಿ ಬಿಜೆಪಿ ಅಭ್ಯರ್ಥಿ ಮಮತಾ ಶಾಂತರಾಮ ಆಳ್ವ ಜಯ ಗಳಿಸಿದ್ದಾರೆ. ೧ನೇ ವಾರ್ಡ್ ಕುಂಬೋಲ್‌ನಲ್ಲಿ ಮುಸ್ಲಿಂ ಲೀಗ್‌ನ ಕೌಸರ್ ನೂರ್‌ಜಮಾಲ್ ಪ್ರತಿಸ್ಪರ್ಧಿಯಾದ ಎಸ್‌ಡಿಪಿಐಯ ರುಖಿಯಾ ಅನ್ವರ್‌ರನ್ನು ಸೋಲಿಸಿದ್ದಾರೆ. ಉಳುವಾರ್‌ನಲ್ಲಿ 90ಕ್ಕೂ ಅಧಿಕ ಮತಗಳಿಗೆ ಮುಸ್ಲಿಂ ಲೀಗ್‌ನ ನಾಫಿಯಾ ಜಯಗಳಿಸಿದರು. ಬಂಬ್ರಾಣದಲ್ಲಿ ಮುಸ್ಲಿಂ ಲೀಗ್‌ನ ಪಂಚಾಯತ್ ಅಧ್ಯಕ್ಷ ಅಭ್ಯರ್ಥಿ ಎಂ.ಪಿ. ಖಾಲಿದ್ 500ಕ್ಕೂ ಅಧಿಕ ಮತಗಳಿಂದ ಜಯಗಳಿಸಿದರು. 7ನೇ ವಾರ್ಡ್‌ನಲ್ಲಿ ಸಿಪಿಎಂನ ಸುಕೇಶ ಭಂಡಾರಿ, 8ರಲ್ಲಿ ಕಾಂಗ್ರೆಸ್‌ನ ಮಂಜುನಾಥ ಆಳ್ವ ಗೆಲುವು ಸಾಧಿಸಿದ್ದಾರೆ.

