ಕಾಸರಗೋಡು: ತ್ರಿಸ್ತರ ಪಂಚಾಯಿತಿ ಚುನಾವಣೆಯ ಜಿದ್ದಾಜಿದ್ದಿನ ಹೋರಾಟದ ಮಧ್ಯೆ ಕಾಸರಗೊಡು ಜಿಲ್ಲಾ ಪಂಚಾಯಿತಿಯಲ್ಲಿ ಎಡರಂಗ ಏಕೈಕ ಅತಿ ದೊಡ್ಡ ಪಕ್ಷವಾಗಿ ಮೂಡಿಬಂದಿದ್ದು, ಆಡಳಿತ ತನ್ನಲ್ಲಿ ಉಳಿಸಿಕೊಮಡಿದೆ. ಒಟ್ಟು 18ಸೀಟುಗಳಿರುವ ಜಿಲ್ಲಾ ಪಂಚಾಯಿತಿಯಲ್ಲಿ ಎಡರಂಗ 9, ಐಕ್ಯರಂಗ 8ಹಾಗೂ ಎನ್ಡಿಎ 1ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಈ ಬಾರಿ ಎರಡು ಡಿವಿಶನ್ ಹೆಚ್ಚಿಸಲಾಗಿತ್ತು.
ಕಳೆದಬಾರಿ ಗೆಲುವು ಸಾಧಸಿದ್ದ ಪುತ್ತಿಗೆ ಡಿವಿಶನ್ ಈಬಾರಿ ಬಿಜೆಪಿ ಕೈತಪ್ಪಿದ್ದು, ಐಕ್ಯರಂಗ ಪಾಲಾಗಿದೆ. ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಜೆ.ಎಸ್ ಸೋಮಶೇಖರ್ ಇಲ್ಲಿ ಐಕ್ಯರಂಗ ಅಭ್ಯರ್ಥಿಯಾಗಿ ಸ್ಪರ್ಧಿಸಿ ಇದಿರಾಳಿ ಬಿಜೆಪಿಯ ಮಣಿಕಂಠ ರೈ ಅವರನ್ನು ಪರಾಭವಗೊಳಿಸಿದ್ದರು. ಬದಿಯಡ್ಕ ಡಿವಿಶನ್ನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ
ಒಕ್ಕೂಟ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಮಪ್ಪ ಮಂಜೇಶ್ವರ ಅವರು ಗೆಲುವು ಸಾಧಿಸಿದ್ದಾರೆ.
ಕಾಸರಗೋಡು ಬ್ಲಾಕ್ ಪಂಚಾಯಿತಿಯಲ್ಲಿ ಎಡರಂಗ ಶೂನ್ಯ ಸಾಧನೆಯಾದರೆ ಎನ್ಡಿಎ 2ಸ್ಥಾನ ಪಡೆದಿದೆ. ಯುಡಿಎಫ್ 16ಸ್ಥಾನಗಳೊಂದಿಗೆ ಆಡಳಿತ ಉಳಿಸಿಕೊಂಡಿದೆ.
ಕಾರಡ್ಕ ಬ್ಲಾಕ್ ಪಂಚಾಯಿತಿಯಲ್ಲಿ ಎಡರಂಗ-9, ಐಕ್ಯರಂಗ-3, ಎನ್ಡಿಎ-2ಸ್ಥಾನ ಗಳಿಸಿದೆ. ಇಲ್ಲಿ ಎಡರಂಗ ಆಡಳಿತ ಉಳಿಸಿಕೊಂಡಿದೆ. ಕಾಞಂಗಾಡು ಬ್ಲಾಕಿನಲ್ಲಿ ಎಡರಂಗ -8, Éೈಕ್ಯರಂಗ -7ಸ್ಥಾನ ಗಳಿಸಿದ್ದರೆ, ನೀಲೇಶ್ವರ ಬ್ಲಾಕ್ ಪಂಚಾಯಿತಿಯಲ್ಲಿ ಎಡರಂಗ-8, ಐಕ್ಯರಂಗ-6, ಪರಪ್ಪ ಬ್ಲಾಕ್ನಲ್ಲಿ
ಎಡರಂಗ-08, ಐಕ್ಯರಂಗ -7ಸ್ಥಾನ ಪಡೆದಿದ್ದರೆ, ಮೂರೂ ಬ್ಲಾಕ್ಗಳಲ್ಲಿ ಎನ್ಡಿಎಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ.
ಚಿತ್ರ: ಕಾಸರಗೋಡು ಜಿಲ್ಲಾ ಪಂಚಾಯಿತಿ ಎನ್ಡಿಎ ಅಬ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾದ ರಾಮಪ್ಪ ಮಂಜೇಶ್ವರ ಅವರಿಗೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಪ್ರಮಾಣಪತ್ರ ವಿತರಿಸಿದರು.


