HEALTH TIPS

ಮಧ್ಯಮ ವರ್ಗದವರ ಜೀವನ ಭಾರತಕ್ಕಿಂತ ಕೆನಡಾದಲ್ಲಿ ಉತ್ತಮವಾಗಿದೆಯೇ? ಚರ್ಚೆ ಹುಟ್ಟುಹಾಕಿದ ಭಾರತೀಯ ಅನಿವಾಸಿ!

ಕೆನಡಾ: ಟೊರೊಂಟೊದಲ್ಲಿ ಒಂದು ವಾರದ ಅವಧಿಯಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಹತ್ಯೆಯಾದ ನಂತರ ಅಲ್ಲಿ ಹೆಚ್ಚಾಗುತ್ತಿರುವ 'ಭಾರತ ವಿರೋಧಿ ಮನಸ್ಥಿತಿಯ ಬಗ್ಗೆ ಕೆನಡಾದ ಪತ್ರಕರ್ತ ಡೇನಿಯಲ್ ಬೋರ್ಡ್‌ಮನ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ವಿಭಿನ್ನ ಅಂಶಗಳಿಂದ ಇಂತಹ ಭಾರತ ವಿರೋಧಿ ಮನಸ್ಥಿತಿಯ ಸಂಸ್ಕೃತಿ ಹೆಚ್ಚಾಗುತ್ತಿದೆ ಎಂದು ಅವರು ಸುದ್ದಿಸಂಸ್ಥೆ ಎಎನ್ ಐಗೆ ತಿಳಿಸಿದ್ದಾರೆ.

ಈ ಮಧ್ಯೆ ಕೆನಡಾದಲ್ಲಿರುವ ಭಾರತೀಯ ವಲಸಿಗರೊಬ್ಬರು ಕೆನಡಾ ಮತ್ತು ಭಾರತದಲ್ಲಿನ ಮಧ್ಯಮ ವರ್ಗದ ಜೀವನವನ್ನು ಹೋಲಿಸುವ ವಿಡಿಯೋದೊಂದಿಗೆ ಆನ್‌ಲೈನ್ ನಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಇನ್‌ಸ್ಟಾಗ್ರಾಮ್ ಕ್ಲಿಪ್‌ನಲ್ಲಿ ವಿಶಾಲ್, ತನ್ನ ದೈನಂದಿನ ಜೀವನವನ್ನು ತೋರಿಸುತ್ತಾ, ಇದಕ್ಕೆ ಹೋಲಿಸಿದರೆ ಭಾರತೀಯ ನಗರಗಳಲ್ಲಿನ ಜೀವನ ನಿಜವಾಗಿಯೂ ಕಠೋರವಾಗಿರುತ್ತೆ ಎಂದು ಹೇಳುತ್ತಾರೆ.

ಭಾರತದ ನಗರಗಳಲ್ಲಿ ಸಾಮಾನ್ಯವಾಗಿ ಹೆಚ್ಚಾಗಿರುವ ಶಬ್ದ ಮಾಲಿನ್ಯಕ್ಕೆ ವ್ಯತಿರಕ್ತವಾಗಿ ನಿರಂತರವಾಗಿ ಹಾರ್ನ್ ಇಲ್ಲದ ಪರಿಸ್ಥಿತಿಯನ್ನು ಅವರು ವಿಡಿಯೋದಲ್ಲಿ ತೋರಿಸುತ್ತಾರೆ.

ಭಾರತದ ಪ್ರಮುಖ ಭಾರತೀಯ ನಗರಗಳಲ್ಲಿ ಹುಡುಕಲು ಕಷ್ಟಕರವಾದ ಉತ್ತಮ ವಾತಾವರಣದಲ್ಲಿನ ಪಕ್ಷಿಗಳ ಚಿಲಿಪಿಲಿಯ ನಿನಾದ ಮತ್ತು ಉಸಿರಾಡುವ ಶುದ್ಧ ಗಾಳಿಯ ಸಾಮರ್ಥ್ಯವನ್ನು ಅವರು ಉಲ್ಲೇಖಿಸುತ್ತಾರೆ. "ಮಧ್ಯಮ ವರ್ಗದ ಕುಟುಂಬದ ಜೀವನವು ಭಾರತಕ್ಕಿಂತ ಕೆನಡಾದಲ್ಲಿ 10 ಪಟ್ಟು ಉತ್ತಮವಾಗಿದೆ ಎಂದು ಶೀರ್ಷಿಕೆಯಡಿ ಈ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ.


ವಿಶಾಲ್ ಅವರ ಈ ಹೇಳಿಕೆ ಆನ್ ಲೈನ್ ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಲವರು ಅವರ ದೃಷ್ಟಿಕೋನವನ್ನು ಬೆಂಬಲಿಸಿದರೆ ಮತ್ತೆ ಕೆಲವರು ಟೀಕೆ ಮಾಡುತ್ತಿದ್ದಾರೆ. ಜೀವನದ ಗುಣಮಟ್ಟ ಸರಳವಾದ ಹೋಲಿಕೆಗಿಂತ ಹೆಚ್ಚು ಸಂಕೀರ್ಣವಾಗಿದೆ ಎಂದು ಹೇಳುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries