ಕಾಸರಗೋಡು: ಕಾನತ್ತೂರು ಶ್ರೀನಾಲ್ವರ್ ದೈವಗಳ ದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವ ಅಂಗವಾಗಿ ಕಳರಿ ಅರಮನೆಯಲ್ಲಿ ಆನೆಚಪ್ಪರ ಏರಿಸುವಿಕೆ, ಮೂಲಸ್ಥಾನ ಬನದಿಂದ ಉತ್ಸವ ನಡೆಯುವ ಅರಮನೆಗೆ ಭಂಡಾರದ ಆಗಮನದೊಂದಿಗೆ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಮಂಗಳವಾರ ಚಾಮುಂಡಿ ದೈವ, ಕಂಡಕಲೆಯ ದೈವಗಳ ಸಂಚಾರ, ಪಂಜುರ್ಲಿ ದೈವಗಳ ನರ್ತನಸೇವೆ ನಡೆಯಿತು.
ಡಿ. 31 ಹಾಗೂ ಜನವರಿ 1ರಂದು ಬೆಳಗ್ಗೆ ಶ್ರೀ ರಕ್ತೇಶ್ವರೀ ದೈವ ಕೋಲ, ತುಲಾಭಾರ ಸೇವೆ, ಮಧ್ಯಾಹ್ನ ಶ್ರೀ ವಿಷ್ಣುಮೂರ್ತಿ ದೈವ, ಪ್ರೇತ ವಿಮೋಚನೆ ನಡೆಯುವುದು. ಜ.2ರಂದು ಬೆಳಗ್ಗೆ ಕಳಗ ಒಪ್ಪಿಸುವುದರೊಂದಿಗೆ ಶ್ರೀ ದೈವಗಳ ಭಂಡಾರದ ನಿರ್ಗಮನವಾಗುವುದು.
ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ಕಳಿಯಾಟ ಮಹೋತ್ಸವದ ಅಂಗವಾಗಿ ಇಳಯೋರ್ ದೈವದ ನರ್ತನ ಸೇವೆ ನಡೆಯಿತು.
ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ನಡೆದುಬರುತ್ತಿರುವ ವಾರ್ಷಿಕ ಕಳಿಯಾಟ ಮಹೋತ್ಸವದ ಅಂಗವಾಗಿ ಮಂಗಳವಾರ ಪಂಜುರ್ಲಿ(ಉಗ್ರಮೂರ್ತಿ)ದೈವದ ನರ್ತನಸೇವೆ ನಡೆಯಿತು.

