ಕುಂಬಳೆ: ಬಟ್ಟೆ ಒಗೆಯುತ್ತಿದ್ದ ಗೃಹಿಣಿಯ ಹಿಂಭಾಗದಿಂದ ಆಗಮಿಸಿ ಅಪ್ಪಿ ಹಿಡಿದು ಮಾನಭಂಗಕ್ಕೆ ಯತ್ನಿಸಿದ ವ್ಯಕ್ತಿಯನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಕೊಯಿಪ್ಪಾಡಿಯ ಪೆರುವಾಡ್ ನಿವಾಸಿ ಜಿತೇಶ್(32)ಬಂಧಿತ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೆರುವಾಡ್ ನಿವಾಸಿ, 34ರ ಹರೆಯದ ಮಹಿಳೆ ಮನೆ ಸನಿಹ ಬಟ್ಟೆ ಒಗೆಯುತ್ತಿದ್ದ ಸಂದರ್ಭ ಆಗಮಿಸಿದ ಆರೋಪಿ ಮಾನಭಂಗಕ್ಕೆ ಯತ್ನಿಸಿರುವ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.

