ಮಂಜೇಶ್ವರ: ಬಾಳ್ಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕ ಮಹೋತ್ಸವ ಅಂಗವಾಗಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಏಕಾಹ ಭಜನಾ ಕಾರ್ಯಕ್ರಮ ಬಾಲಕೃಷ್ಣ ಭಟ್ ದಡ್ಡಂಗಡಿ ಪೌರೋಹಿತ್ಯದಲ್ಲಿ ಜರುಗಿತು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಸಂತಡ್ಕ ಅರಸು ಸಂಕಲ ದೈವ ಕ್ಷೇತ್ರ ಮಾಡದ ಅಧ್ಯಕ್ಷ ಡಾ. ಶ್ರೀಧರ ಭಟ್ ಉಪ್ಪಳ ಅಧ್ಯಕ್ಷತೆ ವಹಿಸಿದ್ದರು. ಬೇರಿಕೆ ಗೋಳಿ ರಕ್ತೇಶ್ವರಿ ಕೋಡಿ ದೈವಕ್ಷೇತ್ರದ ಗೌರವಾಧ್ಯಕ್ಷ ಕೋಡಿ ಶಿವಪ್ರಸಾದ್ ಭಟ್ ಮುಖ್ಯ ಅತಿಥಿಯಾಗಿದ್ದರು. ಮಂದಿರದ ಅಧ್ಯಕ್ಷ ಮುತ್ತು ಶೆಟ್ಟಿ ಬಾಳ್ಯೂರು, ಮಂದಿರದ ಗುರುಸ್ವಾಮಿ ರಾಧಾಕೃಷ್ಣ ರೈ ಹೊಸಮನೆ ಉಪಸ್ಥಿತರಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಸತೀಶ ಅಡಪ ಸಂಕಬೈಲು ಅವರನ್ನು ಗೌರವಿಸಲಾಯಿತು. ಪ್ರಸಂಗ ಕರ್ತ, ಕವಿ ಚಿಗುರುಪಾದೆ ಯೋಗೀಶ್ ರಾವ್ ಅಭಿನಂದನಾ ಭಾಷಣ ಮಾಡಿದರು.
ಮಂದಿರದ ಬೆಳವಣಿಗೆಯಲ್ಲಿ ಸಹಕರಿಸಿದ ಹಿರಿಯ ಭಜನಾ ಸಂಕೀರ್ತನಾಕಾರರಾದ ಜಗನ್ನಾಥ ಶೆಟ್ಟಿ ಪಜಿಂಗಾರು, ರಮೇಶ್ ಎಂ. ಸಂತಡ್ಕ ಅವರನ್ನು ಗೌರವಿಸಲಾಯಿತು.
ಅರವಿಂದಾಕ್ಷ ಭಂಡಾರಿ ಸ್ವಾಗತಿಸಿದರು. ರಾಮಕೃಷ್ಣ ಎಸ್. ಸಂತಡ್ಕ ವಂದಿಸಿದರು. ತೇಜಶ್ರೀ ಪ್ರಾರ್ಥಿಸಿದರು. ಜಯಪ್ರಕಾಶ್ ಶೆಟ್ಟಿ ಅಂಗಡಿದಾರು ನಿರೂಪಿಸಿದರು.
ವಾರ್ಷಿಕ ಉತ್ಸವದ ಮೊದಲ 48 ದಿನಗಳ ಮನೆ ಮನೆ ಭಜನಾ ಅಭಿಯಾನ ಜರುಗಿತು. ಮಂದಿರದಲ್ಲಿ 13ನೇ ವರ್ಷದ ಏಕಾಹ ಭಜನಾ ಕಾರ್ಯಕ್ರಮ ವಸಂತ್ ಭಟ್ ತೊಟ್ಟಿತ್ತೋಡಿ ಅವರ ದೀಪ ಪ್ರಜ್ವಲನದೊಂದಿಗೆ ಜರಗಿತು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬಾಳ್ಯೂರು ಶ್ರೀ ಅಯ್ಯಪ್ಪ ಕೃಪಾ ಅಧ್ಯಯನ ಕೇಂದ್ರದ ಮಕ್ಕಳಿಂದ, ಯಕ್ಷಗಾನ ಗುರುಗಳಾದ ಶೇಖರ ಶೆಟ್ಟಿ ಸಾರಥ್ಯದಲ್ಲಿ ಗಿರಿಜಾ ಕಲ್ಯಾಣ, ವೀರಮಣಿ ಕಾಳಗ ಯಕ್ಷಗಾನ ಬಯಲಾಟ ನಡೆಯಿತು.

.jpg)
